ಆದಿತ್ಯ ದೇವಾಲಯ ರಾಮಕ್ ಹಳ್ಳಿಯಲ್ಲಿರುವ ಹಳೆಯ ಕಾಲದ ದೇವಾಲಯ. ಇದು ಶಿಖರಗಳು, ಹೂವಿನ ಕಣಿವೆಗಳು ಮತ್ತು ಹಚ್ಚ ಹಸಿರಾದ ನಿಸರ್ಗ ಸೌಂದರ್ಯದಿಂದ ಆವೃತ್ತವಾಗಿದೆ. ಇಲ್ಲಿ ಹಿಂದೂ ದೇವತೆ ಸೂರ್ಯನನ್ನು ಆರಾಧಿಸಲಾಗುತ್ತಿದ್ದು ದೊಡ್ಡ ಸಂಖ್ಯೆಯ ಭಕ್ತರು ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಾರೆ. ಒಂದು ನಂಬಿಕೆಯ ಪ್ರಕಾರ, ಈ ದೇವಾಲಯವನ್ನು ಚಂದ ರಾಜವಂಶದ ರಾಜರು ಕಟ್ಟಿಸಿದ್ದರು. ಪ್ರವಾಸಿಗರು ಸಮೀಪದಲ್ಲಿರುವ ಆದಿ ಮತ್ತು ಭೂಮಿಯಾ ದೇವಸ್ಥಾನಗಳನ್ನೂ ನೋಡಬಹುದು.


Click it and Unblock the Notifications