ಚಂಬಲ್ ವನ್ಯಧಾಮವು ಘರಿಯಲ್‍ಗಳಿಗೆ , ಗಾಂಗೇಟಿಕ್ ಡಾಲ್ಫಿನ್‍ಗಳಿಗೆ ಮತ್ತು ಮೊಸಳೆಗಳಿಗೆ ಹೆಸರುವಾಸಿಯಾಗಿದ್ದರು, ಇದು ಒಂದು ಉದಯೋನ್ಮುಖ ಪಕ್ಷಿಧಾಮವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಚಂಬಲ್ ನದಿಯು ವಿಂಧ್ಯ ಪರ್ವತದ ಮಧ್ಯ ಭಾಗದಿಂದ ಉಗಮಗೊಂಡು, ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಹಾದು, ಮಧ್ಯ ಪ್ರದೇಶದ ಮೊರೆನ ಮತ್ತು ಭಿಂದ್ ಜಿಲ್ಲೆಗಳಲ್ಲಿ ಸಾಗಿ, ಉತ್ತರ ಪ್ರದೇಶದ ಆಗ್ರಾ ಮತ್ತು ಎಟವಾ ಜಿಲ್ಲೆಗಳ ಗುಂಟ ಹರಿದು ಕೊನೆಗೆ ಯಮುನಾ ನದಿಯಲ್ಲಿ ಸಂಗಮಗೊಳ್ಳುತ್ತದೆ.
ಚಂಬಲ್ ವನ್ಯಧಾಮವು IN 122 ಎಂಬ ಪ್ರಮುಖ ಪಕ್ಷಿ ತಾಣವಾಗಿ ಪರಿಗಣಿಸಲ್ಪಟ್ಟಿದೆ. ಇಲ್ಲಿ ದೇಶೀಯ ಮತ್ತು ವಿದೇಶಿ ಪಕ್ಷಿಗಳು ಸೇರಿ ಸುಮಾರು 330 ಪ್ರಬೇಧಗಳು ಕಾಣಸಿಗುತ್ತವೆ. ಈ ಕಾರಣದಿಂದಾಗಿ ಇಡೀ ಭಾರತದಲ್ಲಿಯೇ ಈ ಸ್ಥಳವು ಪಕ್ಷಿವೀಕ್ಷಣೆಗಾಗಿ ಭಾರೀ ಜನಪ್ರಿಯಗೊಳ್ಳುತ್ತಿರುವ ತಾಣವಾಗಿದೆ.
ಚಳಿಗಾಲದಲ್ಲಿ ಈ ಪ್ರದೇಶವು ಪಕ್ಷಿ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣವಾಗಿರುತ್ತದೆ. ಈ ತಿಂಗಳುಗಳಲ್ಲಿ ದೇಶೀಯ ಪಕ್ಷಿಗಳ ಜೊತೆಗೆ ಹಿಮಾಲಯ ಮತ್ತು ಆರ್ಕಟಿಕ್ ಪ್ರಾಂತ್ಯದ ಪಕ್ಷಿಗಳು ಸಹ ಇಲ್ಲಿಗೆ ವಲಸೆ ಬರುತ್ತವೆ. ಭಾರತೀಯ ಸ್ಕಿಮ್ಮರ್, ಶ್ವೇತ ಪೃಷ್ಠದ ರಣಹದ್ದು, ಭಾರತೀಯ ರಣ ಹದ್ದು ಮತ್ತು ಗ್ರೇಟರ್ ಸ್ಪಾಟೆಡ್ ಹದ್ದುಗಳನ್ನು ಸಹ ನಾವು ಇಲ್ಲಿ ಕಾಣಬಹುದು.


Click it and Unblock the Notifications