ಧರ್ಮಾಲಯ ಇನ್ಸ್ ಟಿಟ್ಯೂಷನ್ ಸರ್ಕಾರೇತರ ಸಂಸ್ಥೆಯಗಿದ್ದು, ಶಿಕ್ಷಣ, ಸೇವೆ, ಸೌಹಾರ್ದ ಜೀವನ, ಗ್ರಾಮೀಣ ಅಭಿವೃದ್ಧಿ, ಧ್ಯಾನ ಹಾಗೂ ಆಧ್ಯಾತ್ಮಿಕ ಸೇವೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಇದು ಇಕೋ-ಕ್ಯಾಂಪಸ್ ಹೊಂದಿದ್ದು ಇಲ್ಲಿ ಧ್ಯಾನ ಹಾಗೂ ಆಧ್ಯಾತ್ಮದ ಅಭ್ಯಾಸಗಳಿಗೆ ಒತ್ತು ನೀಡಲಾಗಿದೆ. ಈ ಇನ್ಸ್ ಟಿಟ್ಯೂಷನ್, ಆಧ್ಯಾತ್ಮಿಕ ಧ್ಯಾನ ಹಾಗೂ ಸೇವೆ ಮಾಡಲು ಬಯಸುವ ಸ್ವಯಂ ಸೇವಕರಿಗೆ ತರಬೇತಿ ನೀಡುವುದರ ಜೊತೆಗೆ ಅವರನ್ನು 'ಕರ್ಮ ಯೋಗ' ಅಥವಾ ಇತರರ ಸೇವೆಯಲ್ಲಿ ತೊಡಗಿಸಿಕೊಳ್ಳಲು ತರಬೇತಿ ನೀಡುತ್ತದೆ.
ಇನ್ನು ವ್ಯವಸಾಯಕ್ಕೆ ಸಂಬಂಧಿಸಿದಂತೆ ಆರ್ಗ್ಯಾನಿಕ್ ಫಾರ್ಮಿಂಗ್, ಸ್ಥಳೀಯ ಗ್ರಾಮೀಣ ಜನರಿಗೆ ಗ್ರೀನ್ ಜಾಬ್ ತರಬೇತಿ, ಸಸಿ ನೆಡುವ ಕಾರ್ಯಗಾರ ಹಾಗೂ ಗ್ರೀನ್ ಬಿಲ್ಡಿಂಗ್ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.


Click it and Unblock the Notifications