ಬಿಂದು ಅಣೆಕಟ್ಟಿಗಿಂತ ಇಲ್ಲಿಗೆ ತಲುಪುವ ರಸ್ತೆಯ ಬಗ್ಗೆಯೇ ಹೆಚ್ಚು ಹೇಳಬೇಕಾಗುತ್ತದೆ. ಈ ಅಣೆಕಟ್ಟು ಜಲ್ಧಾಕ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ರಬ್ಬರ್ ಮರಗಳು ಮತ್ತು ನದಿ ಛಾಯಾಗ್ರಾಹಕರ ಕ್ಯಾಮರಾ ಕಣ್ಣುಗಳಿಗೆ ಸುಂದರ ನೋಟವನ್ನು ಒದಗಿಸುತ್ತದೆ. ಭೂತಾನಿಗೆ ಹೋಗುವ ಮುಂಚೆ ಬಿಂದುವಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದನ್ನು ಮರೆಯದಿರಿ. ಚಳಿಗಾಲದಲ್ಲಿ ಬಿಂದುವಿನಲ್ಲಿ ಹಿಮಾಚ್ಛಾದಿತ ಪರ್ವತಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಉತ್ತುಂಗಗಳನ್ನು ಹೊರತು ಪಡಿಸಿ ಕೂಡ ಚಳಿಗಾಲದಲ್ಲಿನ ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾದದ್ದು. ಜಲ್ಧಾಕ ಹೈಡೆಲ್ ಪ್ರಾಜೆಕ್ಟ್ ಈ ಅಣೆಕಟ್ಟಿನ ನೀರನ್ನು ಅವಲಂಭಿಸಿದೆ.


Click it and Unblock the Notifications