ಬಿಕಾನೇರ್ ನಿಂದ 250 ಕಿ.ಮೀ ದೂರದಲ್ಲಿರುವ ಜೋಧ್‍ಪುರ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ದೇಶೀಯ ವಿಮಾನ ನಿಲ್ದಾಣವಾಗಿದೆ. ವಿದೇಶಿ ಪ್ರವಾಸಿಗರು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವಾಗಿ ಬಿಕಾನೇರ್ ಗೆ ತಲುಪಬಹುದು. ಈ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಕೊಲ್ಕಟಾ, ಚೆನ್ನೈ, ಬೆಂಗಳೂರು ಮತ್ತು ಮುಂಬೈ ನಗರಗಳ ನಡುವೆ ದೈನಂದಿನ ವಿಮಾನ ಹಾರಾಟದ ವ್ಯವಸ್ಥೆಯನ್ನು ಹೊಂದಿದೆ. ಪ್ರವಾಸಿಗರು ಜೋಧ್‍ಪುರ ವಿಮಾನ ನಿಲ್ದಾಣದಿಂದ ಬೀಕನೇರಿಗೆ ಟ್ಯಾಕ್ಸಿಗಳ ಮೂಲಕ ಕೈಗೆಟುಕುವ ದರದಲ್ಲಿ ತಲುಪಬಹುದು.