ಪ್ರವಾಸಿಗರು ಅನೇಕ ಕಾರಣಗಳಿಗೆ ಖಾವಡಾಕ್ಕೆ ಭೇಟಿ ಕೊಡುವುದು ಒಳ್ಳೆಯದು. ಇದು ಇಂಡಿಯಾ ಮತ್ತು ಪಾಕಿಸ್ತಾನ ಗಡಿ ಪ್ರದೇಶದಿಂದ ಸುಮಾರು ಕೇವಲ 30 ಕೀಲೊ ಮೀಟರ ದೂರದಲ್ಲಿದೆ. ಇದು ಕಚ್ ಪ್ರದೇಶದ ಕೊನೆಯ ಗ್ರಾಮವಾಗಿದೆ. ಇದು ಕರಕುಶಲ ಕಲೆ,ಚರ್ಮದ ಉತ್ಪನ್ನಗಳು, ಸ್ಥಳೀಯ ಕುಶಲ ಕರ್ಮಿಗಳಿಂದ ತಯಾರಿಸಲ್ಪಡುವ ಕಲಾತ್ಮಕ ಜವಳಿಗಳಿಗೆ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿರುವ ಹ್ಯಾಮ್ಲೆಟ ಎಂಬ ಪ್ರದೇಶವು ರಾಜಹಂಸಗಳ ನಿರ್ಗಮನ ಬಿಂದು ಆಗಿದೆ.
ಇಲ್ಲಿ ಪ್ರತಿ ವರ್ಷವೂ ಇಲ್ಲಿ ಸಾವಿರಾರು ರಾಜಹಂಸಗಳು ವಲಸೆ ಬರುತ್ತವೆ. ಇದು ಜಗತ್ತಿನ ಅತಿ ದೊಡ್ಡ ರಾಜಹಂಸಗಳ ಕಾಲೋನಿಯಾಗಿದೆ. ಇದನ್ನು ನೋಡುವುದೇ ಕಣ್ಣಿಗೆ ಆನಂದ. ಈ ಕಾಲೋನಿಯು ಜಾಮಲುಂಡಲಿಯ ಎಂಬ ಮರಭೂಮಿಯಲ್ಲಿರುವ ಸರೋವರದ ಹತ್ತಿರ ಇದೆ. ಇಲ್ಲಿಗೆ ಪ್ರತಿವರ್ಷವೂ ಅಕ್ಟೋಬರ ಮತ್ತು ಮಾರ್ಚ ತಿಂಗಳಿನಲ್ಲಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿಗೆ ನೀವು ತಲುಪಲು ಒಂಟೆ ಸವಾರಿಯನ್ನು ಮಾಡಲೇಬೇಕು. ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.


Click it and Unblock the Notifications