ಪುರಾಣ ಪ್ರಸಿದ್ಧಿಯನ್ನು ಹೊಂದಿರುವ ಜಟಾಯು ಪಕ್ಕ ಸ್ಥಳ, ಭದ್ರಾಚಲಂ ಪಟ್ಣಣದಿಂದ 2 ಕೀ.ಮಿ ಅಂತರದಲ್ಲಿ ಕಾಣಬಹುದಾಗಿದ್ದು ಖಮ್ಮಮ್ ಜಿಲ್ಲೆಯ ಒಂದು ಭಾಗವಾಗಿದೆ. ಈ ಸ್ಥಳವು ಯೇತಪಾಕ ಎಂದೂ ಹೆಸರುವಾಸಿಯಾಗಿದೆ.
ಹಿಂದೂ ಪುರಾಣದ ಪ್ರಕಾರ, ಹದ್ದುಗಳ ರಾಜನಾದ ಜಟಾಯುವು ರಾಕ್ಷಸ ರಾಜ ರಾವಣ ಸೀತಾ ದೇವಿಯನ್ನು ಈ ಮಾರ್ಗದಲ್ಲಿ ಎಳೆದೊಯ್ಯುವಾಗ ರಾವಣನ ಮೇಲೆ ದಾಳಿ ಮಾಡಿದ್ದ (ಮಾಡಿತ್ತು). ರಾವಣಾನು ಸೀತೆಯನ್ನು ತನ್ನ ಪುಷ್ಪಕ ವಿಮಾನದಲ್ಲಿ ಅಪಹರಿಸುತ್ತಿದ್ದ. ಈ ವೇಳೆ ಜಟಾಯು ರಾವಣನ ದಾರಿಗೆ ಅಡ್ದಲಾಗಿ ಬಂದು ಸೀತೆಯನ್ನು ಬಿಡುವಂತೆ ಕೇಳಿದ್ದಕ್ಕೆ ರಾವಣಾನು ಜಟಾಯುವಿನ ರೆಕ್ಕೆಗಳನ್ನು ಒಂದೊಂದಾಗಿ ಕತ್ತರಿಸಿ ಅವನು ಹಾರದಂತೆ ಮಾಡಿದ್ದನು. ನಂತರ ಹದ್ದುಗಳ ರಾಜ ಈ ಹೋರಾಟದಿಂದ ತೀವ್ರವಾಗಿ ಗಾಯಗೊಳ್ಳುತ್ತಾನೆ. ಜಟಾಯುವು ರೇಖಪಲ್ಲಿ ಎಂಬ ಗ್ರಾಮದಲ್ಲಿ ತನ್ನ ರೆಕ್ಕೆಗಳನ್ನು ಕಳೆದುಕೊಂಡನು. ಈ ಗ್ರಾಮವು ಜಟಾಯು ಪಕ್ಕದಿಂದ 55 ಕೀ.ಮಿ ದೂರದಲ್ಲಿದೆ.
ನಂತರ, ಸೀತೆಯನ್ನು ಹುಡುಕಿಕೊಂಡು ಬಂದ ಶ್ರೀ ರಾಮನು ಗಾಯಗೊಂಡ ಜಟಾಯುವನ್ನು ಭೇಟಿಯಾಗುತ್ತಾನೆ. ಜಟಾಯುವಿನ ಮೂಲಕ ರಾವಣನಿಂದ ಸೀತೆಯನ್ನು ಲಂಕೆಗೆ ಅಪಹರಿಸಲಾಗಿದೆ ಎಂಬು ವಿಷಯವನ್ನು ತಿಳಿಯುತ್ತಾನೆ. ಹಾಗೂ ಜಟಾಯುವು ಹೇಗೆ ರಾವಣನನ್ನು ಸೀತಾ ದೇವಿಯನ್ನು ಬಿಡುವಂತೆ ಆಗ್ರಹಿಸಿ ಅವನೊಂದಿಗೆ ಹೋರಾಟ ಮಾಡಿದನು ಎಂಬುದನ್ನು ಅರಿಯುತ್ತಾನೆ. ಆನಂತರದಲ್ಲಿ ಶ್ರೀ ರಾಮನು ಜಟಾಯುವಿಗೆ ಗಾಯವಾಗಿದ್ದ ಜಾಗವನ್ನು ಮುಟ್ಟಿ ತನ್ನ ದೈವ ಶಕ್ತಿಯಿಂದಾಗಿ ಆತನನ್ನು ಗುಣಮುಖಗೊಳಿಸುತ್ತಾನೆ. ಜಟಾಯು ಹಾಗೂ ರಾವಣರ ಯುದ್ಧ ನಡೆದ ಸ್ಥಳವೇ ಜಟಾಯು ಪಕ್ಕ ಎಂಬ ನಂಬಿಕೆಯಿದೆ. ಆದ್ದರಿಂದ ದೇಶದ ಮೂಲೆ ಮೂಲೆಗಳಿಂದ ಯಾತ್ರಿಗಳು ಹಾಗೂ ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.


Click it and Unblock the Notifications