Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾಚಲಂ » ಆಕರ್ಷಣೆಗಳು » ಭದ್ರಾಚಲಂ ರಾಮ ದೇವಾಲಯ

ಭದ್ರಾಚಲಂ ರಾಮ ದೇವಾಲಯ, ಭದ್ರಾಚಲಂ

5

ಭಗವಾನ್ ರಾಮ ಮತ್ತು ದೇವಿ ಸೀತಾಗೆ ಮೀಸಲಾಗಿರುವ ಭದ್ರಾಚಲ ರಾಮ ದೇವಾಲಯ, ಹಿಂದೂ ದೇವಸ್ಥಾನವಾಗಿದ್ದು, ಭದ್ರಾಚಲಂ ಪಟ್ಟಣದ ಜನಪ್ರಿಯ ಧಾರ್ಮಿಕ ತಾಣವಾಗಿದೆ. ಹಿಂದೂ ಪುರಾಣದ ಪ್ರಕಾರ, ಶ್ರೀ ರಾಮನು ವಿಷ್ಣುವಿನ ಏಳನೇ ಅವತಾರ ಎಂದು ಹೇಳಲಾಗುತ್ತದೆ. ದೇವಿ ಸೀತಾ ಮಾತೆಯು ಭಗವಾನ್ ವಿಷ್ಣುವಿನ ಪತ್ನಿಯಾದ, ದೇವತೆ ಲಕ್ಷ್ಮಿಯ ಅವತಾರ ಎಂಬ ನಂಬಿಕೆಯಿದೆ.

ದೇವಾಲಯವು ಭದ್ರಾಚಲಂ ಪಟ್ಟಣದಿಂದ 35 ಕಿಮೀ ದೂರದಲ್ಲಿದೆ. ಮತ್ತು ಇನ್ನಿತರ ಹಿಂದೂ ದೇವ - ದೇವತೆಗಳ ವಿಗ್ರಹಗಳನ್ನು ಇಲ್ಲಿ ಕಾಣಬಹುದು. ಭಗವಾನ್ ವಿಷ್ಣುವಿನ ಇನ್ನೊಂದು ಅವತಾರವಾದ ನರಸಿಂಹ ದೇವರ ವಿಗ್ರಹದ ಜೊತೆಗೆ ಭಗವಾನ್ ಶಿವನನ್ನು ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.

ದೇವಾಲಯವು ರಾಮನ ಭಕ್ತರು ನಡುವೆ ಬಹಳ ಜನಪ್ರಿಯವಾಗಿದೆ. ಜೊತೆಗೆ ಪ್ರತಿ ವರ್ಷ ಈ ದೇವಾಲಯದಲ್ಲಿ ಆಚರಿಸುವ ಉತ್ಸವವಾದ 'ರಾಮ ನವಮಿ' ಸಮಯದಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಸೇರುತ್ತಾರೆ. ರಾಮ ನವಮಿ ಹಾಗೂ ದುಶಿರಾ ಉತ್ಸವವನ್ನು ಸಾಕಷ್ಟು ವಿಜ್ರಂಭಣೆಯಿಂದ ಹಾಗೂ ಹಲವಾರು ಪ್ರದರ್ಶನದ ಮೂಲಕ ಆಚರಿಸಲಾಗುತ್ತದೆ. ಈ ಆಚರಣೆಯ ಸಮಯದಲ್ಲಿ ಅದರಲ್ಲೂ ಉತ್ಸವದ ಕೊನೆಯ 10 ದಿನಗಳಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಭಾಗವಹಿಸುತ್ತಿದ್ದು, ಕೊನೆಯಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸುವುದರ ಮೂಲಕ ಉತ್ಸವಕ್ಕೆ ಪರದೆ ಎಳೆಯಲಾಗುತ್ತದೆ. ನೀವೂ ಬಂದು ಈ ಸಂಭ್ರಮಕ್ಕೆ ಸಾಕ್ಷಿಗಳಾಗಿ!

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri