Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾಚಲಂ » ಆಕರ್ಷಣೆಗಳು » ದುಮ್ಮುಗುಡೆಮ್

ದುಮ್ಮುಗುಡೆಮ್, ಭದ್ರಾಚಲಂ

1

ದುಮ್ಮುಗುಡೆಮ್, ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯ ಉಪವಿಭಾಗವಾಗಿದೆ. ಈ ಸ್ಥಳವು ಭದ್ರಾಚಲಂ ನಿಂದ 25 ಕೀ.ಮಿ ದೂರದಲ್ಲಿದೆ. ಈ ಹಳ್ಳಿಯು ’ಕರೇಲ’ ಅಥವಾ ಹಾಗಲಕಾಯಿ ಆಕಾರದಲ್ಲಿರುವ ಒಂದು ದ್ವೀಪ.

ಈ ಸ್ಥಳವು ದೇಶದ ಹಿಂದೂಗಳ ದೃಷ್ಟಿಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯನ್ನು ಗಳಿಸಿದೆ. ಏಕೆಂದರೆ, ಶ್ರೀ ರಾಮನು ರಾಕ್ಷಸ ಸಹೋದರರಾದ ಖರ ಹಾಗೂ ದುಷಣ ಮತ್ತು ಅವರ14000 ರಾಕ್ಷಸ ಸೈನಿಕರನ್ನು ಈ ಸ್ಥಳದಲ್ಲಿ ವಧೆ ಮಾಡಿದ್ದನು. ನಂತರ ಹತರಾದ ರಾಕ್ಷಸರ ಚಿತಾ ಭಸ್ಮದ ಮೇಲೆ ಬೂಧಿಯ ಮೇಲೆ ದುಮ್ಮುಗುಡೆಮ್ ಹಳ್ಳಿಯನ್ನು ನಿರ್ಮಿಸಲಾಯಿತು ಎಂದು ನಂಬಲಾಗಿದೆ. ’ದುಮ್ಮು’ ಎಂಬ ಪದಕ್ಕೆ ತೆಲುಗಿನಲ್ಲಿ ಬೂದಿ ಎಂಬ ಅರ್ಥವಿದೆ. ಈ ದುಮ್ಮುಗುಡೆಮ್ ದ್ವೀಪದ ಜನರು ಶ್ರೀ ರಾಮನನ್ನು ಆತ್ಮರಾಮ ಎಂದು ಪೂಜಿಸುತ್ತಾರೆ.

ದ್ವೀಪದಲ್ಲಿರುವ ಕನಿಷ್ಠ 100 ವರ್ಷಗಳ ಹಳೆಯದಾದ ಹಾಗೂ ಇನ್ನೂ ಬಲವಾಗಿರುವ ಸೇತುವೆಯ ಮೂಲಕ ದೇಶದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಇನ್ನೊಂದು ಪ್ರಮುಖ ವಿಚಾರವೆಂದರೆ, ಸರ್ ಆರ್ಥರ್ ಕಾಟನ್ ಎಂಬ ಇಂಗ್ಲಿಷ್ ವಾಸ್ತುಶಿಲ್ಪಿ ನಿರ್ಮಿಸಿದ ಎರಡು ಸೇತುವೆಗಳ ಪೈಕಿ ಈ ಸೇತುವೆಯೂ ಒಂದು ! ಈ ಹಿಂದೆ ಬ್ರಿಟಿಷ್ ರು ಮುಖ್ಯವಾಗಿ ಸಾರಿಗೆ ಉದ್ದೇಶಕ್ಕಾಗಿ ಈ ಸೇತುವೆ ಬಳಸುತ್ತಿದ್ದರು. ಆದ್ದರಿಂದ ಈ ಸೇತುವೆಯನ್ನು ನೋಡಲು ದೇಶದ ಎಲ್ಲಾ ಭಾಗಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed