ಇನ್ನು ಬೇಲೂರಿನ ಪ್ರಸಿದ್ಧ ಬಾಲೆ ಅಂದರೆ ದರ್ಪಣ ಸುಂದರಿ ಎಂದೇ ವಿಶ್ವದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಸುಂದರ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಸುಂದರ ಮೂರ್ತಿಯನ್ನು ನೋಡಿ ಮರಳಾಗದವರೇ ಇಲ್ಲವೆನ್ನಬಹುದು. ಹೌದು, ಒಂದು ಕೈಯಲ್ಲಿ ದರ್ಪಣ ಹಿಡಿದು ಸೊಂಟ ಬಳುಕಿಸುತ್ತ ತನ್ನದೇ ಸೌಂದರ್ಯ ನೋಡುತ್ತಿರುವ ಸುಂದರ ಮೂರ್ತಿಯನ್ನು ನೋಡಿದರೆ ಆ ಕಾಲದ ಶಿಲ್ಪಕಲಾ ವೈಭವದ ಶ್ರೀಮಂತಿಕೆ ಮನದಟ್ಟಾಗುತ್ತದೆ. ಬೇಲೂರು ಬಾಲೆ ಬಗ್ಗೆ ಹಲವಾರು ಚಲನಚಿತ್ರಗಳಲ್ಲಿ ಗೀತೆ ಕೂಡ ಬಂದಿವೆ. ಅಲ್ಲದೇ ಬೇಲೂರು ಬಾಲೆಯ ಫೋಟೋಗಳಂತೂ ಈಗಲೂ ಮಾರಾಟವಾಗುತ್ತವೆ ಎಂದರೆ ಬಾಲೆಯ ಸೌಂದರ್ಯ ನೋಡಿಯೇ ಸವಿಯಬೇಕು. ಶೃಂಗಾರದಲ್ಲಿ ನಿರತರಾಗಿರುವ ಸುಂದರ ಮೈಮಾಟದ ಮದನಿಕೆಯರ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತಿರುವುದನ್ನು ನೋಡಿದವರು ಮರಳಾಗದೇ ಇರರು.


Click it and Unblock the Notifications