Search
  • Follow NativePlanet
Share
ಮುಖಪುಟ » ಸ್ಥಳಗಳು » ಬಂಡೀಪುರ » ಆಕರ್ಷಣೆಗಳು » ಬಂಡೀಪುರ ನ್ಯಾಶನಲ್ ಪಾರ್ಕ್

ಬಂಡೀಪುರ ನ್ಯಾಶನಲ್ ಪಾರ್ಕ್, ಬಂಡೀಪುರ

15

ಬಂಡೀಪುರ ವ್ಯಾಪ್ತಿಯ ಪ್ರದೇಶಗಳಲ್ಲಿ ಮುಖ್ಯವಾಗಿ ಪರಿಸರ ಪ್ರಿಯರು,ಸಾಹಸಪ್ರಿಯರು, ಚಾರಣಪ್ರಿಯರು ಭೇಟಿ ನೀಡಲೇಬೇಕಾದಂತಹ ಸ್ಥಳವೆಂದರೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ. ಸುಮಾರು 800 ಸ್ಕೇ.ಕೀ.ಮೀ. ವ್ಯಾಪ್ತಿಯಲ್ಲಿ ವಿಸ್ತಿರಿಸಿರುವ ಈ ಸುಂದರ ಅರಣ್ಯ ಪ್ರದೇಶ ಹೊಂದಿರುವಉದ್ಯಾನವನವನ್ನು ಮೈಸೂರು ಮಹಾರಾಜರು ಕ್ರಿ.ಶ.1931ರಲ್ಲಿ ಉದ್ಘಾಟಿಸಿದರು. ಆ ಸಮಯದಲ್ಲಿ ಕೇವಲ 90 ಸ್ಕೇ.ಕೀ.ಮೀ. ವ್ಯಾಪ್ತಿಯನ್ನಷ್ಟೇ ಗುರುತಿಸಿಕೊಂಡಿದ್ದ ಈ ದಟ್ಟಾರಣ್ಯ  ನಂತರ,1941 ರಲ್ಲಿ ಈ ಪ್ರದೇಶದಲ್ಲಿಪೂಜಿಸಲ್ಪಡುವ ವೇಣುಗೋಪಾಲ ದೇವರ ಹೆಸರಿನಿಂದಾಗಿ ವೇಣುಗೋಪಾಲ ವೈಲ್ಡ್ ಪಾರ್ಕ್ ಎಂದು ಕರೆಯಲ್ಪಡಲಾಯಿತು.

 

ಪ್ರವಾಸಿಗರು ಬಂಡೀಪುರ ದಟ್ಟಾರಣ್ಯದಲ್ಲಿ ಹರಿಯುವ ನಾಗೂರ, ಕಬಿನಿ ಮತ್ತು ಮೊಯರ್ ನದಿ ದಂಡೆಯಲ್ಲಿಂದ ಕಾಡಿನ ಸೌಂದರ್ಯವನ್ನುಸವಿಯಬಹುದಾಗಿದೆ.ಇಲ್ಲಿರುವ ಕಾಡುಪ್ರಾಣಿಗಳ ಸಾಲಿನಲ್ಲಿ ಅಳಿಲು, ಕಾಡು ನಾಯಿ, ಕಪ್ಪು ಗೂಗಿ,ಗೌಜುಗ ವಿವಿಧ ಜಾತಿಯ ಗುಬ್ಬಿಗಳು, ಕೆಂಪೆದೆಯ ಪಾರಿವಾಳ ಸೇರಿದಂತೆಅನೇಕ ಅಪರೂಪದ ಪ್ರಾಣಿ ಪಕ್ಷಿಗಳನ್ನು ಬಂಡೀಪುರ ದಟ್ಟಾರಣ್ಯದಲ್ಲಿ ಕಾಣಬಹುದು.

ಅನೇಕ ವನಸ್ಪತಿ ಮತ್ತು ಹಲವಾರು ಗಿಡಗಳಿಗೆ ಆಶ್ರಯ ನೀಡಿರುವ ಬಂಡೀಪುರ ಅರಣ್ಯ ಪ್ರದೇಶದ ಉದ್ಯಾನವನದ ಪ್ರವೇಶಕ್ಕೆ ಭಾರತೀಯರು ರೂ.25 ಮತ್ತು ವಿದೇಶಿಯರು ರೂ.150 ಶುಲ್ಕ ನೀಡಬೇಕಾಗುತ್ತದೆ. ಬೆಳಗಿನ 10 ರಿಂದ ಸಂಜೆ 6 ರವರೆಗೆ ಮಾತ್ರ ಪ್ರವೇಶಾವಕಾಶವಿದ್ದು ಉಳಿದ ಸಮಯದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉದ್ಯಾನವನ ಮುಚ್ಚಲಾಗುತ್ತದೆ.ವಿವಿಧ ತಳಿಯ ಸಸ್ಯಗಳು, ಬಿದಿರಿನ ಹಲವಾರು ಜಾತಿಯ ಗಿಡಗಳು ಮತ್ತು ಔಷಧಿಯ ಗುಣಗಳುಳ್ಳ ಬಳ್ಳಿಗಳು ಕೂಡ ಬಂಡೀಪುರ ಅರಣ್ಯದಲ್ಲಿ ವಿಫುಲವಾಗಿವೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat