Search
  • Follow NativePlanet
Share
ಮುಖಪುಟ » ಸ್ಥಳಗಳು » ಬಂಡೀಪುರ » ಹವಾಮಾನ

ಬಂಡೀಪುರ ಹವಾಮಾನ

ಅಕ್ಟೋಬರ್ ತಿಂಗಳಿಂದ ಮೇ ತಿಂಗಳವರೆಗೆ ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಅರಸುತ್ತ ಸುತ್ತಾಡುವುದನ್ನು ನಾವು ಸಫಾರಿ ಸಮಯದಲ್ಲಿ ಕಾಣಬಹುದು. ಈ ಸಮಯವು ಪ್ರವಾಸಿಗರಿಗೂ ಮತ್ತು ಪ್ರಾಣಿಗಳಿಗೂ ಉತ್ತಮ ಹವಾಮಾನವೆಂದು ಅರಣ್ಯ ಇಲಾಖೆಯ ಹೇಳಿಕೆ.

ಬೇಸಿಗೆಗಾಲ

ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗಿನ ನಾಲ್ಕು ತಿಂಗಳು ಬೇಸಿಗೆ ಸಮಯವಾಗಿರುವುದರಿಂದ ಉಷ್ಣಾಂಶ 35 ಡಿ.ಸೆ.ವರೆಗೂ ಇರುತ್ತದೆ. ಸಂಜೆ ಮಾತ್ರ25 ಡಿ.ಸೆ. ವರೆಗೂ ಉಷ್ಣಾಂಶ ಇಳಿಕೆಯಾಗುವುದರಿಂದ ಬರುವುದರಿಂದ ಕೊಂಚ ಹಿತಕರ ವಾತಾವರಣ ಎನಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಪ್ರವಾಸಿಗರು ಕೂಲಿಂಗ್ ಗ್ಲಾಸ್, ಕ್ಯಾಪ್, ಹತ್ತಿ ಬಟ್ಟೆಗಳನ್ನು ಧರಿಸಿಕೊಂಡು ಬಂದರೆ ಒಳ್ಳೆಯದು.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳು ಮಳೆಗಾಲವಿರುವುದರಿಂದ ಈ ಸಮಯದಲ್ಲಿ ಬಂಡೀಪುರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುತ್ತದೆ.ಈ ಅರಣ್ಯ ಪ್ರದೇಶಕ್ಕೆ ಬರುವ ಪ್ರವಾಸಿಗರು ಮಳೆಗಾಲದ ಸಮಯದಲ್ಲಿ ಸೂಕ್ತ ಬಟ್ಟೆ, ಜಾಕೇಟ್ , ಛತ್ರಿ, ರೇನಕೋಟ್, ಮಳೆಗಾಲದ ಶೂ ಧರಿಸಿಕೊಂಡು ಬರುವುದನ್ನುಮಾತ್ರ ಮರೆಯಬಾರದು.

ಚಳಿಗಾಲ

ಇನ್ನು ನವೆಂಬರ್ ನಿಂದ ಫೆಬ್ರವರಿ ತಿಂಗಳವರೆಗಿನ ನಾಲ್ಕು ತಿಂಗಳು ಚಳಿಗಾಲದ ಸಮಯದಲ್ಲಿ ಇಲ್ಲಿನ ಉಷ್ಣಾಂಶ ಹಗಲಿನಲ್ಲಿ 25 ಡಿ.ಸೆ.ಇದ್ದರೆ ಸಂಜೆಯಾಗುತ್ತಲೇ ಒಮ್ಮೆಲೇ 10 ಡಿ.ಸೆ.ವರೆಗೂ ಇಳಿಕೆಯಾಗಿರುತ್ತದೆ. ತಂಪಾದ ವಾತಾವರಣದಲ್ಲಿ ಬಂಡೀಪುರ ಅರಣ್ಯದಲ್ಲಿ ತಿಂಡಿ ತಿನಿಸು ತಿನ್ನುತ್ತಸುತ್ತಾಡುವುದೇ ವಿಶೇಷ ಆನಂದ ನೀಡುತ್ತದೆ. ಈ ಸಮಯದಲ್ಲೂ ಬೆಚ್ಚಗಿನ ಬಟ್ಟೆಗಳನ್ನು ಧರಿಸಿಕೊಂಡೇ ಬಂದರೆ ಒಳ್ಳೆಯದು. ಇಲ್ಲವಾದಲ್ಲಿ ಇಲ್ಲಿನ ತಂಪಾದ ವಾತಾವರಣ ಬಂಡೀಪುರ ಪ್ರವಾಸದ ಮಜ ನೀಡದೇ ಕಿರಿಕಿರಿ ಎನಿಸಬಹುದು.