Search
  • Follow NativePlanet
Share
ಮುಖಪುಟ » ಸ್ಥಳಗಳು » ಬನವಾಸಿ » ಆಕರ್ಷಣೆಗಳು » ಮಧುಕೇಶ್ವರ ದೇವಸ್ಥಾನ

ಮಧುಕೇಶ್ವರ ದೇವಸ್ಥಾನ, ಬನವಾಸಿ

1

ಬನವಾಸಿಗೆ ತೆರಳಿದ ಪ್ರವಾಸಿಗರು 9 ನೇ ಶತಮಾನದಲ್ಲಿ ಕದಂಬ ಸಾಮ್ರಾಜ್ಯದಿಂದ ರೂಪಿಸಲ್ಪಟ್ಟಿದ್ದ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಅದರ ಸುಂದರವಾದ ಮತ್ತು ವಿಶಿಷ್ಟ ವಾಸ್ತುಶಿಲ್ಪ ಕೆತ್ತನೆಗಳು, ವಿನ್ಯಾಸಗಳು ಪ್ರವಾಸಿಗರಲ್ಲಿ ಹೆಸರುವಾಸಿಯಾಗಿವೆ.

 

ಭಗವಾನ್ ವಿಷ್ಣುವಿನ ಮತ್ತು ಭಗವಾನ್ ವಿಷ್ಣುವಿನ ಅಲಂಕೃತ ಪ್ರತಿಮೆಗಳನ್ನು ದೇವಸ್ಥಾನದ ಒಳ ಸಂಕೀರ್ಣದಲ್ಲಿ ಕಾಣಬಹುದು. ಒಂದು ಕಲ್ಲಿನ ಮಂಚ ಮತ್ತು ತ್ರಿಲೋಕ ಮಂಟಪ ನಂತಹ ವಿನ್ಯಾಸಗಳು ಭೂಮಿ, ಸ್ವರ್ಗ ಮತ್ತು ಪಾತಾಳಗಳನ್ನು ಪ್ರದರ್ಶಿಸುವಂತಹ ಏಕಶಿಲಾ ಕೆತ್ತನೆಗಳನ್ನು ಪ್ರವಾಸಿಗರು ವೀಕ್ಷಿಸಬಹುದು . ಆದಾಗ್ಯೂ, ಇಲ್ಲಿನ ಪ್ರಮುಖ ಆಕರ್ಷಣೆ , ಗಣೇಶನ ಅರ್ಧಭಾಗ ಮಾತ್ರ ಇರುವ ಮೂರ್ತಿ , ಇದರ ಇನ್ನರ್ಧ ವಾರಣಾಸಿಯಲ್ಲಿದೆ ಎಂದು ನಂಬಲಾಗಿದೆ. ಕೇವಲ ಗಣೇಶನಲ್ಲದೆ , ಭಗವಾನ ನರಸಿಂಹನ ಮೂರ್ತಿಯನ್ನೂ ಮಧುಕೇಶ್ವರ ದೇವಾಲಯದಲ್ಲಿ ಕಾಣಬಹುದು.

ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು 2 ನೇ ಶತಮಾನದ , ಐದು ಹೆಡೆಗಳ ನಾಗರ ಶಿಲ್ಪವನ್ನು ಕಾಣಬಹುದು. ಈ ನಾಗರ ಶಿಲ್ಪದ ಮೇಲೆ ಶಾಸನ (ಪ್ರಾಕೃತ ಭಾಷೆಯಲ್ಲಿ) ಬರೆದಿರುವುದು ಹತ್ತಿರದ ವೀಕ್ಷಣೆಯಿಂದ ಯಾತ್ರಿಕರ ಗಮನಕ್ಕೆ ಬರುತ್ತದೆ. ಶಾಸನದಿಂದ ಪಡೆದ ಮಾಹಿತಿ ಪ್ರಕಾರ, ವಿಹಾರ ಮತ್ತು ಹೊಂಡಗಳ ಸ್ಥಾಪನೆಯ ನಂತರ ರಾಜಕುಮಾರ ಶಿವಸ್ಕಂದ ನಾಗಶ್ರಿ, ನಾಗ ಶಿಲ್ಪಗಳನ್ನು ಇಲ್ಲಿ ಸ್ಥಾಪಿಸಿದನು. ದೇಶಾದ್ಯಂತದ ಶಿವನ ಭಕ್ತರು ಶಿವರಾತ್ರಿ ಸಂದರ್ಭದಲ್ಲಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿನೀಡುತ್ತಾರೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon