Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ಆಕರ್ಷಣೆಗಳು » ತುಳಸಿ ಸ್ಮಾರಕ ಭವನ

ತುಳಸಿ ಸ್ಮಾರಕ ಭವನ, ಅಯೋಧ್ಯಾ

2

1969ರಲ್ಲಿ ಉತ್ತರ ಪ್ರದೇಶದ ಅಂದಿನ ರಾಜ್ಯಪಾಲರಾದ ಶ್ರೀ ವಿಶ್ವನಾಥ್ ದಾಸ್ ಜಿ ಅವರು ಸಂತ ಕವಿ ಹಾಗೂ ರಾಮಾಯಣವನ್ನು ಪುನರ್ ಬರೆದಿದ್ದ ಗೋಸ್ವಾಮಿ ತುಳಸಿ ದಾಸ್  ಅವರ ಸ್ಮರಣೆಗಾಗಿ ತುಳಸಿ ಸ್ಮಾರಕ ಭವನ ನಿರ್ಮಿಸಿದ್ದರು. ರಾಜ್ ಗಂಗಾ ಕ್ರಾಸಿಂಗ್ ನ ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದ 300 ಅಡಿಯಲ್ಲಿ ಈ ಭವನವನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲೇ ಕುಳಿತುಕೊಂಡು ಸಂತ ತುಳಸಿದಾಸ್ ರಾಮಾಯಣ ಬರೆದಿದ್ದರು ಎಂದು ನಂಬಲಾಗಿದೆ.

ಸ್ಮಾರಕದಲ್ಲಿ ಒಂದು ಸಂಶೋಧನಾ ಕೇಂದ್ರವಿದ್ದು, ಇದನ್ನು ಅಯೋಧ್ಯಾ ಶೋಧ ಸಂಸ್ಥಾನ್ ಎಂದು ಕರೆಯಲಾಗುತ್ತದೆ. ಇತಿಹಾಸಕಾರರು ಮತ್ತು ವಿಧ್ವಾಂಸರ ಅಪಾರ ಮೌಲ್ಯದ ಒಂದು ದೊಡ್ಡ ಗ್ರಂಥಾಲಯ ಇಲ್ಲಿದೆ. ಈ ಸ್ಮಾರಕದಲ್ಲಿ ರಾಮಕಥಾ ಸಂಗ್ರಹಾಲಯವಿದೆ. ಈ ಮ್ಯೂಸಿಯಂನ್ನು 1988ರಲ್ಲಿ ಸ್ಥಾಪಿಸಲಾಯಿತು. ಶ್ರೀರಾಮನಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸುವುದು ಮತ್ತು ಪ್ರದರ್ಶಿಸುವುದು ಈ ಮ್ಯೂಸಿಯಂನ ಮುಖ್ಯ ಉದ್ದೇಶವಾಗಿದೆ.

ಕಲಾ ಪ್ರದರ್ಶನಕ್ಕೆ ಸಾಂಸ್ಕೃತಿಕ ವೇದಿಕೆಯೂ ಈ ಸ್ಮಾರಕದಲ್ಲಿದೆ. 2004ರ ಮೇ 20ರ ಬಳಿಕ ಇಲ್ಲಿ ಪ್ರತೀದಿನ ರಾಮ ಲೀಲಾವನ್ನು ಪ್ರದರ್ಶಿಸಲಾಗುತ್ತಿದೆ. ಸ್ಮಾರಕದಲ್ಲಿ ಪ್ರಾರ್ಥನೆ, ಧಾರ್ಮಿಕ ಚರ್ಚೆ, ಧರ್ಮೋಪದೇಶ, ಭಕ್ತಿಗೀತೆ, ಸಂಗೀತ ಮತ್ತು ಕೀರ್ತನೆಗಳನ್ನು ಹಾಡಲಾಗುತ್ತದೆ. ಶ್ರಾವಣ ಮಾಸದ ಏಳನೇ ದಿನದಂದು ಬರುವ ತುಳಸಿ ಜಯಂತಿಯನ್ನು ಇಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue