Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ಆಕರ್ಷಣೆಗಳು » ರಾಮಕಥಾ ಪಾರ್ಕ್

ರಾಮಕಥಾ ಪಾರ್ಕ್, ಅಯೋಧ್ಯಾ

1

ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯಾ ವರ್ಷವಿಡೀ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಂದ ತುಂಬಿತುಳುಕುತ್ತಿರುತ್ತದೆ. ನಗರದಲ್ಲಿ ಹಲವಾರು ಮಂದಿರ, ಘಾಟ್, ಐತಿಹಾಸಿಕ ಕಟ್ಟಡಗಳು ಮತ್ತು ಸ್ಮಾರಕಗಳಿರುವುದರಿಂದ ಭಾರಿ ಸಂಖ್ಯೆಯ ಪ್ರವಾಸಿಗಳಿಂದ ಈ ಪ್ರದೇಶಕ್ಕೆ ಭಾರೀ ಹೊರೆಯಾಗುತ್ತಿದೆ. ಅದರಲ್ಲೂ ಉತ್ಸವಗಳ ಸಂದರ್ಭದಲ್ಲಿ ಆತಥೇಯರಿಗೆ ಜನ ದಟ್ಟಣೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಈ ಪವಿತ್ರ ಸ್ಥಳಗಳು ಮತ್ತು ನಗರದ ಒಳಭಾಗದ ಮೇಲೆ ಆಗುವ ಜನಸಂದಣಿಯ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ರಾಮಕಥಾ ಪಾರ್ಕ್ ನ್ನು ನಿರ್ಮಿಸಲಾಯಿತು. ನಗರದ ಜನತೆಗೆ ಸಮಾಧಾನ ನೀಡುವಂತಹ ಸುಂದರ, ವಿಶಾಲ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನ ಇದಾಗಿದೆ.

ಈ ಉದ್ಯಾನದಲ್ಲಿ ತೆರೆದ ರಂಗಮಂದಿರವಿದ್ದು, ಇದರಲ್ಲಿ ಪಾರ್ಕ್, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳು ನಡೆಯುತ್ತಿದೆ. ಸಾರ್ವಜನಿಕ ಉಪನ್ಯಾಸಗಳು, ಗ್ರಂಥ ವಾಚನ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಂದ ಉದ್ಯಾನ ಯಾವಾಗಲೂ ಜೀವಂತವಾಗಿರುತ್ತದೆ. ನೃತ್ಯ, ಸಂಗೀತ ಹಾಗೂ ಕಾವ್ಯದಲ್ಲಿ ಸ್ಥಳೀಯ ಹಾಗೂ ಹೊರಗಿನ ಉದಯೋನ್ಮುಖ ಕಲಾವಿದರಿಗೆ ತಮ್ಮ ಪ್ರತಿಭೆಗಳನ್ನು ತೋರಿಸಲು ಈ ರಂಗಮಂದಿರ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಎಲ್ಲಾ ವಯೋಮಾನದ ಪ್ರವಾಸಿಗಳಿಗೆ ಆಧ್ಯಾತ್ಮಿಕತೆಯ ಪರಿಸರದಲ್ಲಿ ಸಂಜೆ ಮತ್ತು ವಾರಾಂತ್ಯದಲ್ಲಿ ಕಾಲ ಕಳೆಯಲು ಈ ಉದ್ಯಾನ ಜನಪ್ರಿಯ ವಿರಾಮ ತಾಣವಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat