ಅಯೋಧ್ಯಾದಲ್ಲಿ ಅತೀ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಯಾತ್ರಾ ಸ್ಥಳ ಹನುಮಾನ್ ಗರ್ಹಿ ಅಥವಾ ಹನುಮಂತನ ಮನೆ. ಇದು ಹನುಮಂತನಿಗಾಗಿ ನಿರ್ಮಿಸಲ್ಪಟ್ಟಿರುವ ಮಂದಿರ. ಅಯೋಧ್ಯಾದ ದಿಬ್ಬದ ಮೇಲೆ ಈ ಮಂದಿರವಿದೆ ಮತ್ತು ತುಂಬಾ ದೂರದಿಂದ ಕೂಡ ಈ ಮಂದಿರ ವೀಕ್ಷಿಸಬಹುದಾಗಿದೆ. ಈ ಮಂದಿರವನ್ನು ನೋಡಲು 76 ಮೆಟ್ಟಿಲುಗಳಿವೆ.
ಹತ್ತನೇ ಶತಮಾನದ ಮಧ್ಯಭಾಗದಲ್ಲಿ ಅವಧ್ ನ ನವಾಬ್ ಮಂದಿರ ನಿರ್ಮಾಣಕ್ಕಾಗಿ ಜಾಗವನ್ನು ನೀಡಿದ್ದ ಮತ್ತು ಆತನ ಉಪಪತ್ನಿಯರಲ್ಲಿ ಒಬ್ಬಾಕೆ ಇದನ್ನು ನಿರ್ಮಾಣ ಮಾಡಿದ್ದಳು. ಹನುಮಾನ್ ಗರ್ಹಿ ಒಂದು ಗುಹಾ ಮಂದಿರ. ಇದು ಚೌಕಾಕಾರದ ಕೋಟೆಯ ಸ್ವರೂಪದಲ್ಲಿದ್ದು, ನಾಲ್ಕು ಮೂಲೆಗಳಲ್ಲಿ ವೃತ್ತಾಕಾರದ ಭದ್ರಕೋಟೆ ಹೊಂದಿರುವ ಕಟ್ಟಡದ ಹಾಗೆ ಇದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಮಾತೆ ಅಂಜಲಿಯ ತೊಡೆಯ ಮೇಲೆ ಬಾಲ ಹನುಮ ಕುಳಿತಿರುವ ಮೂರ್ತಿಯಿದೆ.
ಇದು ಧಾರ್ಮಿಕ ಕಾರಣಗಳಿಂದ ಮಾತ್ರವಲ್ಲದೆ ವಾಸ್ತುಶಿಲ್ಪದಿಂದಲೂ ಅತ್ಯಂತ ಪ್ರಾಮುಖ್ಯವಾಗಿರುವ ಮಂದಿರ. ಈ ಮಂದಿರಕ್ಕೆ ಭೇಟಿ ನೀಡುವುದರಿಂದ ಹೆಚ್ಚಿನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಜನರದಲ್ಲಿದೆ. ವರ್ಷವಿಡೀ ಈ ಮಂದಿರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.


Click it and Unblock the Notifications