ಅರ್ಕಿ ಮತ್ತು ಬಟಾಲ್ ಘಾಟಿ ನಡುವಿನ ಪ್ರದೇಶದಲ್ಲಿರುವ ದುರ್ಗಾ ದೇವಸ್ಥಾನ ಅರ್ಕಿಯ ಮತ್ತೊಂದು ಪ್ರಮುಖ ಪ್ರವಾಸಿ ಕೇಂದ್ರ. ಇದು ಹಿಂದೂ ದೇವತೆ ದುರ್ಗಾ ಮಾತೆಯ ಶಕ್ತಿ ಕೇಂದ್ರವಾಗಿದೆ. ದುರ್ಗೆಯ ರೂಪದಲ್ಲಿ ಎಲ್ಲಾ ದೇವತೆಗಳ ಶಕ್ತಿ ಇಲ್ಲಿ ನೆಲೆಗೊಂಡಿದೆ ಎಂದು ನಂಬಲಾಗಿದೆ. ಸಪ್ಟೆಂಬರ್ ಹಾಗೂ ಅಕ್ಟೋಬರ್‌ಗಳಲ್ಲಿ ನಡೆಯುವ ನವರಾತ್ರಿ ಇಲ್ಲಿನ ಪ್ರಮುಖ ಉತ್ಸವ. ಶೀಖರ ವಾಸ್ತು ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯ ಇದಾಗಿದ್ದು, ಲುತುರು ಮಹಾದೇವ ದೇವಾಲಯದ ಮುಂಭಾಗದಲ್ಲಿ ಈ ದೇವಾಲಯವಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸುತ್ತಮುತ್ತಲಿನ ಸಮ್ಮೋಹನಗೊಳಿಸುವ ಪರಿಸರವನ್ನು ವೀಕ್ಷಿಸಿ ಆನಂದಿಸಬಹುದು.


Click it and Unblock the Notifications