ಜಖೋಲಿ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಭದ್ರಕಾಳಿ ದೇವಸ್ಥಾನ ಅರ್ಕಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬೋಸ್ಟಸ್ ಕಲಾವಿನ್ಯಾಸ ಹಾಗೂ ಶೀಖರ ವಾಸ್ತುಶಿಲ್ಪ ಶೈಲಿಯ ಸಂಯೋಜನೆಯಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಹಿಮಾಲಯದ ಶಕ್ತಿಪೀಠಗಳೆಂದು ಕರೆಸಿಕೊಳ್ಳುವ ಮೂರು ದೇವಾಲಯಗಳ ಪೈಕಿ ಇದೂ ಒಂದು. ಹಿಂದೂ ದೇವತೆ ದುರ್ಗೆಯ ಅವತಾರವಾದ ಕಾಳಿ ಇಲ್ಲಿನ ಪ್ರಮುಖ ದೇವರು, ವರ್ಷದ ಎಲ್ಲಾ ದಿನಗಳಲ್ಲಿ ಇಲ್ಲಿಗೆ ಭಕ್ತರ ದಂಡು ಹರಿದುಬರುತ್ತದೆ. ಕಾಳಿಯನ್ನು ಪ್ರಾರ್ಥಿಸಿದರೆ ಮನಃಶಾಂತಿಯ ಜತೆಗೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇಲ್ಲಿಯ ಜನರಲ್ಲಿ ಬಲವಾಗಿ ಬೇರೂರಿದೆ.


Click it and Unblock the Notifications