Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಆಕರ್ಷಣೆಗಳು » ಪದ್ಮಾಪುರಂ ಬೊಟಾನಿಕಲ್ ಗಾರ್ಡನ್

ಪದ್ಮಾಪುರಂ ಬೊಟಾನಿಕಲ್ ಗಾರ್ಡನ್, ಅರಕು ಕಣಿವೆ

1

ಪದ್ಮಾಪುರಂ ಬೊಟಾನಿಕಲ್ ಗಾರ್ಡನ್ ಎನ್ನುವುದು ಪೂರ್ವ ಘಟ್ಟದಲ್ಲಿ ಬರುವ ಅರಕು ರಸ್ತೆಯಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಉದ್ಯಾನವನವಾಗಿದೆ. ಈ ಉದ್ಯಾನವನವನ್ನು ಎರಡನೆ ಮಹಾಯುದ್ಧದ ಅವಧಿಯಲ್ಲಿ ಯುದ್ಧ ನಿರತ ಸೈನಿಕರಿಗೆ ತರಕಾರಿ ಬೆಳೆಯುವ ಸಲುವಾಗಿ ನಿರ್ಮಾಣ ಮಾಡಲಾಯಿತು. ಅನಂತರ ಇದನ್ನು ಸುಮ್ಮನೆ ಬೊಟಾನಿಕಲ್ ಗಾರ್ಡನ್ ಎಂದು ಕರೆಯಲಾಯಿತು. ಆದಾಗಿಯು ಈಗ ತರಕಾರಿ ತೋಟಕ್ಕಿಂತ ಉತ್ತಮವಾದ ಉದ್ಯಾನವನವಾಗಿ ರೂಪುಗೊಂಡಿದೆ. ಪದ್ಮಾಪುರಂ ಬೊಟಾನಿಕಲ್ ಗಾರ್ಡನ್‍ನಲ್ಲಿ ಈಗ ಒಂದು ತೋಟಗಾರಿಕಾ ನರ್ಸರಿ ಇದ್ದು, ಅದರಲ್ಲಿ ಹಲವಾರು ವಿದೇಶಿ ಮತ್ತು ಅಪರೂಪದ ದೇಶಿಯ ಹೂಗಿಡಗಳ ಮತ್ತು ಮರಗಳ ಮಾದರಿಗಳನ್ನು ಸಂರಕ್ಷಿಸಲಾಗಿದೆ.

ಪದ್ಮಾಪುರಂ ಬೊಟಾನಿಕಲ್ ಗಾರ್ಡನ್‍ನ ಮತ್ತೊಂದು ಮಹತ್ವದ ಅಂಶವೆಂದರೆ ಇಲ್ಲಿ ಒಂದು ಪುಟಾಣಿ ರೈಲು ಇದ್ದು, ಮಕ್ಕಳು ಮತ್ತು ವಯಸ್ಕರು ಇಬ್ಬರಿಗು ಮೋಜು ಮಾಡಲು ಅನುಕೂಲವಾಗಿದೆ. ಈ ಪುಟಾಣಿ ರೈಲನ್ನು ಉದ್ಯಾನವನದಲ್ಲಿ ಸ್ಥಾಪಿಸಲಾಗಿದ್ದು, ಪ್ರವಾಸಿಗರು ಇಡೀ ಪ್ರದೇಶವನ್ನು ಇದರಲ್ಲಿ ಕುಳಿತು ಸುತ್ತಿ ನೋಡುವ ಅವಕಾಶವನ್ನೊದಗಿಸುತ್ತದೆ.ಈ ಉದ್ಯಾನವನದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ವಿಶೇಷವಾದ ಗುಲಾಬಿ ಉದ್ಯಾನವನ್ನು ಬೆಳೆಸಲಾಗಿದೆ. ಅಲ್ಲದೆ ಇಲ್ಲಿನ ಮರಗಳ ಮೇಲೆ ಕುಟೀರವನ್ನು ನಿರ್ಮಿಸಲಾಗಿದೆ.  ಈ ವೃಕ್ಷ ಮನೆಗಳು ಬಾಡಿಗೆಗೆ ದೊರೆಯುತ್ತವೆ. ಆದರೆ ಅದನ್ನು ಮೊದಲೆ ಮುಂಗಡವಾಗಿ ಕಾಯ್ದಿರಿಸಬೇಕಾದುದು ಅತ್ಯಾವಶ್ಯಕ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City