ಸುಂದರ್ ವನ್ ಎಂಬುದು ಪರಿಸರ ಶಿಕ್ಷಣ ಕೇಂದ್ರ (CEE), ಅಹಮದಾಬಾದ್‍ನ ಒಂದು ಯೋಜನೆಯಾಗಿದೆ. ಮಕ್ಕಳು ಮತ್ತು ಯುವಕರಲ್ಲಿ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿ ಒಂದು ಮೃಗಾಲಯವನ್ನು ಸ್ಥಾಪಿಸಲಾಗಿದೆ. ಪರಿಸರ ಶಿಕ್ಷಣವನ್ನು ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಇಲ್ಲಿ ನಿರಂತರವಾಗಿ ನಡೆಸಲಾಗುತ್ತಿರುತ್ತದೆ. ಇದರ ಆವರಣದಲ್ಲಿ ಬಿದಿರು ಮತ್ತು ಆಲದಮರಗಳನ್ನು ನಾವು ನೋಡಬಹುದು. ಇಲ್ಲಿ ಸಾಧು ಪ್ರಾಣಿಗಳನ್ನು ಸ್ವತಂತ್ರವಾಗಿ ಓಡಾಡಿಕೊಂಡಿರಲು ಬಿಡಲಾಗಿದೆ.
ಇದಲ್ಲದೆ ಭಾನುವಾರಗಳಂದು ಹಾವುಗಳನ್ನು ಸಹ ಇಲ್ಲಿನ ಪಂಜರಗಳಿಂದ ಹೊರಗೆ ತರಲಾಗುತ್ತದೆ. ಮಂಡಲ, ಕೆಂಪು ಹೆಬ್ಬಾವು ಮತ್ತು ನಾಗರಹಾವುಗಳನ್ನು ನಾವಿಲ್ಲಿ ಕಾಣಬಹುದು. ಕೆಲವೊಮ್ಮೆ ಅಲ್ಲಲ್ಲಿ ಹಾವಿನ ಪೊರೆಗಳನ್ನು ಸಹ ನಾವು ಕಾಣಬಹುದು. ಇವುಗಳ ಜೊತೆಗೆ ಆಮೆ, ಮಾರ್ಶ್ ಮೊಸಳೆಗಳು, ಮುಳ್ಳು ಹಂದಿ, ಜಲಚರಗಳನ್ನು ಹೊಂದಿರುವ ಸಣ್ಣ ಅಕ್ವೇರಿಯಂ ಮತ್ತು ನವಿಲು, ಹೊಂಬಣ್ಣದ ನವಿಲು, ಕಾಡುಕೋಳಿ ಇತ್ಯಾದಿ ಪಕ್ಷಿಗಳನ್ನು ಹೊಂದಿರುವ ಬಾನಾಡಿಗಳ ವಿಭಾಗವನ್ನು ಸಹ ನಾವಿಲ್ಲಿ ನೋಡಬಹುದು.


Click it and Unblock the Notifications