Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಸರ್ಖೆಜ್ ರೋಝಾ

ಸರ್ಖೆಜ್ ರೋಝಾ, ಅಹಮದಾಬಾದ್

4

ಸರ್ಖೆಜ್ ರೋಝಾವು ಗುಜರಾತಿನಲ್ಲಿರುವ ಮಸೀದಿ, ಸಮಾಧಿಗಳನ್ನು ಹೊಂದಿರುವ ರೋಝಾ ಸಂಕೀರ್ಣಗಳಲ್ಲಿಯೇ ಅತ್ಯಂತ ಪ್ರಮುಖವಾದದುದಾಗಿದೆ. ಅಹಮದಾಬಾದ್‍ನಿಂದ 7 ಕಿ.ಮೀ ದೂರದಲ್ಲಿರುವ ಸರ್ಖೆಜ್‍ನಲ್ಲಿರುವ ಈ ಸಂಕೀರ್ಣವನ್ನು ಸುಲ್ತಾನ್ ಅಹಮದ್‍ಶಾನು ನಿರ್ಮಿಸಲು ಆರಂಭಿಸಿದನು. ಮುಂದೆ ಇದನ್ನು ಕುತುಬುದ್ದಿನ್ ಅಹಮದ್ ಶಾ ಮುಂದುವರಿಸಿದನು. ಕೊನೆಗೆ ಇದನ್ನು ಮಹಮದ್ ಬೆಗ್ಡನು ಪೂರ್ಣಗೊಳಿಸಿದನು.

ಸೂಫಿ ಸಂತನಾದ ಶೇಖ್ ಅಹಮದ್ ಖಟ್ಟು ಗಂಜ್ ಬಕ್ಷ್ ರವರು ನಿಧನ ಹೊಂದಿದಾಗ ಸುಲ್ತಾನ್ ಮಹಮ್ಮದ್ ಶಾರವರು ಅವರ ನೆನಪಿಗಾಗಿ ಒಂದು ಗೋರಿಯನ್ನು ಮತ್ತು ಮಸೀದಿಯನ್ನು ನಿರ್ಮಿಸಿದರು.  ನಂತರ ಮಹಮ್ಮದ್ ಬೆಗ್ಡರವರು ಇಲ್ಲಿ ಬೇಸಿಗೆ ಅರಮನೆ, ಕೇಂದ್ರಿಕೃತ ನೀರಿನ ತೊಟ್ಟಿ, ಮೊಗಸಾಲೆಗಳು, ಸಣ್ಣದಾದ ಖಾಸಗಿ ಮಸೀದಿಯಂತಹ ರಚನೆಗಳನ್ನು ನಿರ್ಮಿಸಿದನು. ಆದಾದ ಮೇಲೆ ಆತನ, ಆತನ ರಾಣಿ ಮತ್ತು ಮಗನ ಗೋರಿಗಳನ್ನು ಇಲ್ಲಿಯೇ ನಿರ್ಮಿಸಲಾಯಿತು.

ಈ ಕಟ್ಟಡವು ಇಸ್ಲಾಮಿಕ್, ಹಿಂದೂ  ಮತ್ತು ಜೈನ ಶೈಲಿಯನ್ನು ಹೊಂದಿದ್ದು, ಇತರ ಸಮಕಾಲೀನ ಸ್ಮಾರಕಗಳಂತೆಯೆ ಕಾಣುತ್ತದೆ. ಇದರಲ್ಲಿರುವ ಗುಮ್ಮಟಗಳು, ಸ್ತಂಭಗಳು ಮತ್ತು ಕಮಾನುಗಳು ಇಸ್ಲಾಮಿಕ್ ಶೈಲಿಯಲ್ಲಿದ್ದರೆ, ಕೆತ್ತನೆಗಳು ಮತ್ತು ಉಬ್ಬುಶಿಲ್ಪಗಳು ಹಿಂದೂ ಶೈಲಿಯಲ್ಲಿವೆ. ಇಲ್ಲಿನ ಎಲ್ಲಾ ಕಲ್ಲುಗಳಿಗೆ ಆಧಾರವಾಗಿ ಕಮಾನುಗಳನ್ನು ನಿರ್ಮಿಸಿಲ್ಲವಾದರು, ಕಲ್ಲುಗಳ ಒಳಗೆ ಆಂತರಿಕವಾಗಿ ಬಂಧವನ್ನು ನೀಡಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed