Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಪಿರಲಾಸೀರಿ

ಪಿರಲಾಸೀರಿ, ಕಣ್ಣೂರು

1

ಕಣ್ಣೂರಿನಿಂದ 14 ಕಿ.ಮೀ.ದೂರದಲ್ಲಿರುವ ಒಂದು ಚಿಕ್ಕ ಪಟ್ಟಣ ಪಿರಲಾಸೀರಿ. ಕಣ್ಣೂರು-ಕೂತ್ತುಪರಂಬ ಹೆದ್ದಾರಿಯಲ್ಲಿ ಬರುವ ಈ ಪಟ್ಟಣಕ್ಕೆ ರಸ್ತೆ ಮಾರ್ಗವಾಗಿ ಸುಲಭವಾಗಿ ಹೋಗಬಹುದು. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಸುಬ್ರಹ್ಮಣ್ಯ ದೇವಸ್ಥಾನ. ಕೇರಳಾದ ಎಲ್ಲಾ ಭಾಗದ ಭಕ್ತರಿಗೆ ಇದು ಪವಿತ್ರ ಸ್ಥಳವಾಗಿದೆ. ಪುರಾಣ ಕಥೆಗಳು ಹೇಳುವಂತೆ ಸೀತೆ ಅಪಹರಣದ ನಂತರ ರಾಮ ಮತ್ತು ಲಕ್ಷ್ಮಣ ಲಂಕೆಗೆ ಹೋಗುವ ಮೊದಲು ಈ ಪ್ರದೇಶದಲ್ಲಿ ಬೀಡುಬಿಟ್ಟಿದ್ದರು ಎನ್ನಲಾಗಿದೆ.

ಈ ದೇವಸ್ಥಾನದಲ್ಲಿ ಆರಾಧಿಸಲ್ಪಡುವ ದೇವತೆ ಸುಬ್ರಹ್ಮಣ್ಯ, ಇದನ್ನು ಮುರುಗ ದೇವಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿನ ದೇವಸ್ಥಾನದಲ್ಲಿರುವ ತಾಮ್ರದ ಸರ್ಪ ಅತ್ಯಂತ ಆಕರ್ಷಣೀಯವಾದದ್ದು. ಈ ದೇವಸ್ಥಾನದ ವಾಸ್ತುಶಿಲ್ಪ ಮೋಹಕವಾಗಿದ್ದು ಮುಂಭಾಗದಲ್ಲಿರುವ ಕಲ್ಯಾಣಿ ಹಾಗೂ ಸುತ್ತಲಿನ ಶಿಲ್ಪಕಲೆ ಸುಂದರವಾಗಿದೆ. ಅನೇಕ ಜಾನಪದ ನೃತ್ಯ ಕಾರ್ಯಕ್ರಮಗಳು ಈ ದೇವಾಲಯದಲ್ಲಿ ನಡೆಯುತ್ತದೆ. ಅವುಗಳಲ್ಲಿ ಸೀತಾಂಕನ್ ತುಲಾಲ್, ಚಕ್ಯಾರ್ಕೋಟ್ಟು, ಊಟನ್ತುಲಾಲ್, ಕಥಕ್ಕಳಿ ಹಾಗೂ ಪರಾಯನ್ ತುಲಾಲ್ ಪ್ರಮುಖವಾದವುಗಳು. ಈ ದೇವಾಲಯದಲ್ಲಿ ಹರಕೆ ಮಾಡಿಕೊಂಡ ಭಕ್ತರು ಸರ್ಪಕ್ಕೆ ಮೊಟ್ಟೆ ನೀಡುವ ಧಾರ್ಮಿಕ ಆಚರಣೆ ಇದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat