Search
  • Follow NativePlanet
Share
ಮುಖಪುಟ » ಸ್ಥಳಗಳು» ಮಲಂಪುಳಾ

ಮಲಂಪುಳಾ - ಚಿತ್ರಸದೃಶ ಪ್ರಾಕೃತಿಕ ಸೌಂದರ್ಯ

26

ಕೇರಳದ ಚಿತ್ರಸದೃಶ ಪ್ರಾಕೃತಿಕ ಸೌಂದರ್ಯಕ್ಕೆ ಕಳಶವಿಟ್ಟಂತೆ ಇರುವ ಪ್ರದೇಶ ಮಲಂಪುಳಾ. ಆಣೆಕಟ್ಟು, ಉದ್ಯಾನ ಹಾಗೂ ಗಗನಚುಂಬೀ ಪರ್ವತಗಳು ಇಲ್ಲಿನ ವಿಶೇಷತೆ. ಕೇರಳದ ಅನ್ನದ ಬಟ್ಟಲು ಎಂದೇ ಹೆಸರಾಗಿರುವ ಪಾಲಕ್ಕಾಡ್ ಜಿಲ್ಲೆಯಲ್ಲಿ ಈ ಪ್ರದೇಶವಿದ್ದು, ನಿಸರ್ಗಪ್ರೇಮಿಗಳು, ವಿಹಾರ ಪ್ರಿಯರನ್ನು ಕೈಬಿಸಿ ಕರೆಯುತ್ತದೆ.

ಇಲ್ಲಿರುವ ಆಣೆಕಟ್ಟಿನ ಮೂಲಕವೇ ಕೇರಳ ರಾಜ್ಯಕ್ಕೆ ನೀರು ಸರಬರಾಜಾಗುತ್ತದೆ. ಕೇರಳಕ್ಕೆ ಅಗತ್ಯವಿರುವ ವಿದ್ಯುತ್‌ ನ ಬಹತೇಕ ಪ್ರಮಾಣದ ವಿದ್ಯುತ್‌ ಇಲ್ಲಿಯೇ ಉತ್ಪಾದನೆಯಾಗುತ್ತಿದೆ. ವ್ಯಾಪಕ ರಾಜಕಾಲುವೆಗಳು ಇಲ್ಲಿದ್ದು, ಕೇರಳದ ಅತಿದೊಡ್ಡ ನೀರಾವರಿ ಆಣೆಕಟ್ಟು ಎಂದೇ ಈ ಪ್ರದೇಶ ಹೆಸರಾಗಿದೆ.  

ಮಲಂಪುಳಾ, ಪಾಲಕ್ಕಾಡ್ ಪಟ್ಟಣದಿಂದ 10 ಕಿಮೀ ಅಂತರದಲ್ಲಿದೆ. ಇಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು ಸಂಗತಿಗಳಿವೆ. ಮನುಷ್ಯ ಕೌಶಲ್ಯ ಮತ್ತು ಪ್ರಕೃತಿಯ ನೈಜತೆ ಬೆರೆತಿರುವ ಅಪರೂಪವಾದ ಪ್ರದೇಶ ಇದಾಗಿದ್ದು, ಪ್ರವಾಸಪ್ರಿಯರ ಮನಸಿಗೆ ಮುದ ನೀಡುತ್ತದೆ.

ಮಲಂಪುಳಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಣೆಕಟ್ಟು ಮತ್ತು ಅದರ ಹಿನ್ನೀರು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜಲಾಶಯದಿಂದ ಕೇವಲ 2 ಕಿಲೋಮೀಟರ್‌ ಅಂತದಲ್ಲಿರುವ ಫ್ಯಾಂಟಸಿಪಾರ್ಕ್‌ ಮೋಜು ಮಸ್ತಿಯ ಜತೆ ಉತ್ತಮ ಮನರಂಜನೆ ನೀಡುವ ಸ್ಥಳವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಈ  ಪ್ರದೇಶದ ಇತರೆ ಆಕರ್ಷಣೆಗಳೆಂದರೆ, ಥ್ರೆಡ್ ಗಾರ್ಡನ್, ಸ್ನೇಕ್ ಪಾರ್ಕ್, ಯಕ್ಷಿ ಪ್ರತಿಮೆ, ಬಂಡೆ ಉದ್ಯಾನ, ಫ್ಯಾಂಟಸಿ ಪಾರ್ಕ್, ಉಡನ್‌ ಖಟೋಲಾ ಮತ್ತು ಥೆಂಕುರುಸ್ಸಿ. ಮಲಂಪುಳಾ ಮತ್ತು ಪರಾಂಬಿಕುಲಂ ಅಭಯಾರಣ್ಯ ಪರಿಸರ ಮತ್ತು ವನ್ಯಜೀವಿ ಪ್ರಿಯರಿಗೆ ಖುಷಿ ಕೊಡುತ್ತದೆ. ಇಲ್ಲಿನ ಮೌನ ಕಣಿವೆ ರಾಷ್ಟ್ರೀಯ ಉದ್ಯಾನ, ನೆಲ್ಲಿಯಂಪತ್ತಿ ಕರಡಿ ಪಾರ್ಕ್, ಪೋಥುಂಡಿ ಜಲಾಶಯ ಮತ್ತು ಧೋನಿ ಅರಣ್ಯ ಮೀಸಲು ಕ್ಷೇತ್ರಗಳು ಇನ್ನಷ್ಟು ವೈವಿಧ್ಯಮಯ ಪ್ರವಾಸೀ ಸಾಧ್ಯತೆಗಳನ್ನು ನಿಮಗೆ ಉಣಬಡಿಸುತ್ತವೆ.

ಮಲಂಪುಳಾಗೆ ಭೇಟಿ ನೀಡಿದಾಗ...

ಬೇಸಿಗೆಯಲ್ಲಿ ಅತ್ಯಂತ ಬಿಸಿಯಾದ ವಾತಾವರಣ ಹೊಂದಿರುವ ಮಲಂಪುಳಾಕ್ಕೆ ಚಳಿಗಾಲದಲ್ಲಿಯೇ ಹೋಗುವುದು ಒಳಿತು. ಇಲ್ಲಿನ ಚಳಿಗಾಲ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಈ ಹೊತ್ತಿನಲ್ಲಿ ಹೊರಾಂಗಣ ವೀಕ್ಷಣೆ ಮತ್ತು ಸುತ್ತಾಟ ಮಾಡುವುದಕ್ಕಾಗಿ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಉತ್ಸವಗಳ ಪಟ್ಟಣ ಎಂದೇ ಹೆಸರಾಗಿರುವ ಪಾಲಕ್ಕಾಡಿನ ಕಳಪಥೀ ರಥೋತ್ಸವ ಮತ್ತು ಕಾಲಪೂಥು(ಎತ್ತಿನ ಓಟ) ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿ ಗಮನ ಸೆಳೆಯುತ್ತವೆ. ಈ ವಿಶಿಷ್ಟವಾದ ಉತ್ಸವಗಳಲ್ಲಿ ನೀವೂ ಪಾಲ್ಗೊಂಡು ಮಿನುಗಬಹುದಾಗಿದೆ.

ಮಲಂಪುಳಾಗೆ ತಲುಪುವ ಬಗೆ

ಮಲಂಪುಳಾಗೆ ಗೆ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕವಾಗಿ ಬರಬಹುದಾಗಿದ್ದು, ನಿಮ್ಮ ಬಜೆಟ್‌ಗೆ ಅನುಗುಣವಾಗಿ ರಜಾದಿನಗಳನ್ನು ಇಲ್ಲಿ ಕಳೆಯಬಹುದಾಗಿದೆ. ವಿರಾಮದ ವೇಳೆಗೆ ಆರಾಮವನ್ನು ನೀಡುವ ಪರಿಶುದ್ಧ ಪ್ರವಾಸೀ ಅನುಭವವನ್ನು ಕಟ್ಟಿಕೊಡುವ ತಾಣ ಇದು.

ಮಲಂಪುಳಾ ಪ್ರಸಿದ್ಧವಾಗಿದೆ

ಮಲಂಪುಳಾ ಹವಾಮಾನ

ಉತ್ತಮ ಸಮಯ ಮಲಂಪುಳಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಲಂಪುಳಾ

  • ರಸ್ತೆಯ ಮೂಲಕ
    ಮಲಂಪುಳಾಗೆ ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಂದ ಸಂಪರ್ಕ ಲಭ್ಯವಿದೆ. ಕೇರಳ ರಾಜ್ಯ ಸಾರಿಗೆ ಬಸ್ಗಳು (ಕೆಎಸ್ಆರ್ಟಿಸಿ) ಮತ್ತು ಖಾಸಗಿ ಬಸ್ಸುಗಳ ಮೂಲಕ ಪಾಲಕ್ಕಾಡ್ ಗೆ ತಲುಪಬಹುದು. ಚೆನೈ, ಕೊಯಿಮತ್ತೂರು ಮತ್ತು ಬೆಂಗಳೂರು ಇತರ ಪ್ರಮುಖ ನಗರಗಳಿಗೆ ರಸ್ತೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಲಂಪುಳಾ ಹತ್ತಿರದ ರೈಲ್ವೇ ನಿಲ್ದಾಣ ಪಾಲಕ್ಕಾಡ್. ಇದನ್ನು ಪಾಲಕ್ಕಾಡ್ ಜಂಕ್ಷನ್ ಎಂದು ಕರೆಯಲಾಗುತ್ತದೆ ಹಾಗೂ ಇದು ಭಾರತದ ಎಲ್ಲಾ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಟ್ಯಾಕ್ಸಿಗಳು ಹಾಗೂ ಆಟೋ ರಿಕ್ಷಾಗಳು ನಿಲ್ದಾಣದಿಂದ ಮಲಂಪುಳಾಗೆ ಲಭ್ಯವಿದೆ. ಮತ್ತು ಬಸ್ ಸೌಲಭ್ಯ ಕೂಡ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಲಂಪುಳಾ ಕೊಯಿಮತ್ತೂರು ಏರ್ಪೋರ್ಟ್ ನಿಂದ 55 ಕಿ.ಮಿ ದೂರದಲ್ಲಿದೆ. ಹಾಗೂ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 160 ಕಿ.ಮೀ ಹಾಗೂ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 110 ಕಿ.ಮೀ ದೂರದಲ್ಲಿದೆ. ಟ್ಯಾಕ್ಸಿ ಸೇವೆಗಳು ಎಲ್ಲಾ ವಿಮಾನ ನಿಲ್ದಾಣಗಳಿಂದ ಮಲಂಪುಳಾಗೆ ಲಭ್ಯವಿದೆ. ಕೊಚ್ಚಿ, ಕ್ಯಾಲಿಕಟ್ ಮತ್ತು ಕೊಯಿಮತ್ತೂರಿನಿಂದ ಪಾಲಕ್ಕಾಡ್ ಗೆ ನಿರಂತರ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed