Search
  • Follow NativePlanet
Share
ಮುಖಪುಟ » ಸ್ಥಳಗಳು» ದೊಡ್ಡಮಾಕಳಿ

ದೊಡ್ಡಮಾಕಳಿ - ಮೀನುಗಾರಿಕಾ ಸ್ವರ್ಗ

6

ಬೆಂಗಳೂರಿನಿಂದ 132 ಕಿಮೀ ದೂರದಲ್ಲಿರುವ, ಭೀಮೇಶ್ವರಿ ಮೀನುಗಾರಿಕೆ ಕ್ಯಾಂಪ್ ನಿಂದ 6 ಕಿಮೀ ಮೇಲ್ದಂಡೆಯಲ್ಲಿರುವ ದೊಡ್ಡಮಾಕಳಿ ತನ್ನ ಗ್ರಾಮೀಣ  ಸೊಗಡಿನಿಂದ ಮತ್ತು ಅರಣ್ಯಕ ಸೊಬಗಿನಿಂದಾಗಿ ಕರ್ನಾಟಕದಲ್ಲಿ ಜನಪ್ರಿಯ ರಮಣೀಯ ತಾಣಗಳಲ್ಲಿ ಒಂದಾಗಿದೆ. ದೊಡ್ಡಮಾಕಳಿ ಕಾರ್ಪೊರೇಟ್ ಟೀಮ್ ಬಿಲ್ಡಿಂಗ್ ಗೆ ಹಾಗು ಬೆಂಗಳೂರಿಗರಿಗೆ ವಾರಾಂತ್ಯದ ವಿಶ್ರಾಂತಿಯೊದಗಿಸುವ ಜನಪ್ರಿಯ ಸ್ಥಳವಾಗಿದೆ. ಇದು ನಗರದ ಗದ್ದಲದ ವಾತಾವರಣದಿಂದ ದೂರವಿರುವದರಿಂದ ತನ್ನ ವೀಕ್ಷಕರಿಗೆ ಒಂದು ವಿಶ್ರಾಂತಿದಾಯಕ ಪರಿಸರವನ್ನು ಒದಗಿಸುತ್ತದೆ. ಕಾವೇರಿ ನದಿ ತೀರದಲ್ಲಿರುವ  ದೊಡ್ಡಮಾಕಳಿ ವನ್ಯಜೀವಿಗಳ, ವಿವಿಧ ಪಕ್ಷಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದ್ದು ಇಲ್ಲಿ ಅನೇಕ ಸಾಹಸ ಚಟುವಟಿಕೆಗಳು ಜರುಗುವದಲ್ಲದೇ ವಿಶ್ರಾಂತಿದಾಯಕ ಚಟುವಟಿಕೆಗಳೂ ನಡೆಯುತ್ತವೆ.

ಪ್ರವಾಸಿಗರು  ದೊಡ್ಡಮಾಕಳಿಗೆ ಭೇಟಿ ನೀಡಲು ಕಾರಣ

ಇಲ್ಲಿ ಜುಟ್ಟುಳ್ಳ ಕೋಗಿಲೆ, ಕಂದು ಗಿಡುಗ, ಪೈಡ್, ಕಪ್ಪು ಹೊಟ್ಟೆಯ ನದಿ ಟೆರ್ನ್, ಕಡಲ ಡೇಗೆ, ಬೂದು ತಲೆಯ ಮೀನುಗಿಡುಗ, ಜೇನು ಬುಜ್  ಕಪ್ಪುಬಿಳಿ ಮಿಂಚುಳ್ಳಿ, ಸ್ಪಾಟ್ ಡಕ್ ಮರಕುಟಿಗಗಳಂತಹ ಪಕ್ಷಿಗಳು ಸೇರಿದಂತೆ ಹಲವಾರು ಭೂ ಹಾಗೂ ಜಲ ಆಧಾರಿತ ಪಕ್ಷಿಗಳ 200 ಕ್ಕೂ ಹೆಚ್ಚು ಪ್ರಭೇದಗಳು ಇಲ್ಲಿವೆ ಎಂದು ಅಂದಾಜಿಸಲಾಗಿದ್ದು ಈ ಸ್ಥಳವು ಪಕ್ಷಿ ವೀಕ್ಷಕರ ತಾಣವಾಗಿದೆ.

ಈ ಪ್ರದೇಶದಲ್ಲಿ ಜಂಗಲ್ ಸಫಾರಿಗೆ ಅವಕಾಶವಿದ್ದು ಕಾಡು ಹಂದಿ, ಸಾಂಬಾರ್, ಚುಕ್ಕೆ ಜಿಂಕೆ, ಅಳಿವಿನಂಚಿನಲ್ಲಿರುವ ನರೆಗೂದಲಿನ ದೈತ್ಯ ಅಳಿಲುಗಳು, ಚಿರತೆಗಳು, ಆನೆಗಳು, ಮಲಬಾರ್ ದೈತ್ಯ ಅಳಿಲುಗಳು ಮತ್ತು ನರಿಗಳಂತಹ ಮುಂತಾದ ಸಸ್ತನಿಗಳನ್ನು ಇಲ್ಲಿ ಕಾಣಬಹುದು. ಅಲ್ಲದೇ ಜವುಗು ಮೊಸಳೆಗಳು, ಆಮೆಗಳು, ಗೋಸುಂಬೆಗಳು, ಹೆಬ್ಬಾವುಗಳು, ಕೋಬ್ರಾಗಳು, ರಸೆಲ್ ವೈಪರ್, ಪಟ್ಟಿಗಳುಳ್ಳ ಕ್ರೈಟ್ಗಳು ಮತ್ತು ಲೇಯ್ತ್ ನ ಮೃದು ಚಿಪ್ಪಿನ ಆಮೆಗಳಂತಹ  ಸರೀಸೃಪ ಜಾತಿಯ ಪ್ರಾಣಿಗಳನ್ನೂ ಸಹ ಇಲ್ಲಿ ನೋಡಬಹುದಾಗಿದೆ.

ಕಾವೇರಿಯು ನಿಧಾನವಾಗಿ ಕೆಳಗಿಳಿದು ಅಲ್ಲೇ ಇರುವ ಒಂದು ದೊಡ್ಡ ಹಳ್ಳದಲ್ಲಿ  ಸಂಗ್ರಹಿತಳಾಗುವಂತಹ ಅಪೂರ್ವ ದೃಶ್ಯವನ್ನು ನೋಡುವ ಅವಕಾಶವೂ ಇಲ್ಲಿನ ಸಂದರ್ಶಕರಿಗೆ ದೊರೆಯುವುದು. ಇಲ್ಲಿನ ಮೀನುಗಾರಿಕೆ ಶಿಬಿರದಲ್ಲಿ 'ಹಿಡಿ ಮತ್ತು ಬಿಡು' ವಿಧಾನವನ್ನು ಪಾಲಿಸಲಾಗುತ್ತಿದ್ದು  ಗಾಳಹಾಕಿದವರ ಅದೃಷ್ಟವಿದ್ದರೆ ಮಹ್ಸೀರ್ ಮತ್ತು ಇತರ ಸ್ಥಳೀಯ ಮೀನುಗಳು ಅವರ ಗಾಳಕ್ಕೆ ಬೀಳಬಹುದು. ಆರಂಭಿಕ ಮೀನುಗಾರರೂ ಸಹ ಮೀನುಗಾರಿಕೆಯ ಆನಂದವನ್ನು ಅನುಭವಿಸಲೆಂಬ ದೃಷ್ಟಿಯಿಂದ ಇಲ್ಲಿ ಮಾರ್ಗದರ್ಶಕರ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇಷ್ಟೇ ಅಲ್ಲ, ಇನ್ನೂ ಇದೆ.....

ಕಯಾಕಿಂಗ್ ಮತ್ತು ಕಾವೇರಿ ನದಿ  ರಾಫ್ಟಿಂಗ್, ದೋಣಿ ಸವಾರಿ, ಬೈಕಿಂಗ್ ಮತ್ತು ಚಾರಣಗಳಂತಹ ಸಾಹಸ ಚಟುವಟಿಕೆಗಳು ಇಲ್ಲಿ ಸಾಮಾನ್ಯವಾಗಿರುವದರಿಂದ ಸಾಹಸ ಮನೋಭಾವದ ಪ್ರವಾಸಿಗರಿಗೆ ಇದು ನೆಚ್ಚಿನ ತಾಣವಾಗಿದೆ.

ದೊಡ್ಡಮಾಕಳಿಗೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಾಗಿ ಪ್ರಕೃತಿಯ ಸವಿಯನ್ನು ಸವಿಯುತ್ತಾ ಕಾಲ್ನಡಿಗೆಯಲ್ಲೇ ಹತ್ತಿರದಲ್ಲೇ ಇರುವ ಪುರಾತನ ಶಿವ ದೇವಸ್ಥಾನಕ್ಕೆ ಭೇಟಿನೀಡುವರು. ಇಲ್ಲಿನ ಅರಣ್ಯದ ಮೂಲನಿವಾಸಿಗಳು  ಸೋಲಿಗ ಪಂಗಡದ ಬುಡಕಟ್ಟು ಜನರು ಇವರು ಶತಮಾನಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. ಅವರ ಪುರಾತನ ರೀತಿಯ ಜೀವನಶೈಲಿಯ ಬಗ್ಗೆ ತಿಳಿಯಲು ಪ್ರವಾಸಿಗರು ಆಗಾಗ ಇಲ್ಲಿಗೆ ಬೇಟಿನೀಡುವದುಂಟು. ಭೀಮೇಶ್ವರಿ ಮೀನುಗಾರಿಕಾ ಕ್ಯಾಂಪ್, ಮೇಕೆದಾಟು ಜಲಪಾತಗಳು, ಸಂಗಮ ಮತ್ತು ಶಿಂಶಾ ಜಲಪಾತಗಳು ದೊಡ್ಡಮಾಕಳಿಗೆ ಸಮೀಪದಲ್ಲಿರುವ ಪ್ರವಾಸಿ ತಾಣಗಳಾಗಿವೆ.

ದೊಡ್ಡಮಾಕಳಿಯಿಂದ ಬೆಂಗಳೂರು ಮೂರು ಗಂಟೆಗಳ ಪ್ರಯಾಣ. ಆದ್ದರಿಂದ ಜುಲೈ, ಆಗಸ್ಟ್ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು.  ಮುಂಗಾರಿನ ನಂತರದ ದಿನಗಳಲ್ಲಿ ಈ ತಾಣವು ಸಮೃದ್ಧ ವನರಾಶಿಯಿಂದ ತುಂಬಿರುವದರಿಂದ ಆ ದಿನಗಳಲ್ಲೂ ಕೂಡ ಇಲ್ಲಿಗೆ ಭೇಟಿ ನೀಡಬಹುದು.

ದೊಡ್ಡಮಾಕಳಿ ಪ್ರಸಿದ್ಧವಾಗಿದೆ

ದೊಡ್ಡಮಾಕಳಿ ಹವಾಮಾನ

ಉತ್ತಮ ಸಮಯ ದೊಡ್ಡಮಾಕಳಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದೊಡ್ಡಮಾಕಳಿ

  • ರಸ್ತೆಯ ಮೂಲಕ
    ಭೀಮೇಶ್ವರಿಯಿಂದ 6 ಕಿಮೀ ಮೇಲ್ದಂಡೆಯಲ್ಲಿರುವದರಿಂದ ದೊಡ್ಡಮಾಕಳಿಗೆ ಬರಬೇಕೆಂದರೆ ನಿಯಮಿತ ಬಸ್ಗಳಿಂದ ಬೆಂಗಳೂರಿನಿಂದ ಭಿಮೇಶ್ವರಿಗೆ ಬಂದು ಮುಂದೆ ಚಾರಣ ಮಾಡಬೇಕು. ಬೆಂಗಳೂರಿನಿಂದ ಭೀಮೇಶ್ವರಿಗೆ ಕೆಎಸ್ಆರ್ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಸೇವೆಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬೆಂಗಳೂರು ಸಿಟಿ ಜಂಕ್ಷನ್ ದೊಡ್ಡಮಾಕಳಿಯ ಹತ್ತಿರದ ರೈಲು ತುದಿಯಾಗಿದೆ. ಬೆಂಗಳೂರಿನಿಂದ ಭೀಮೇಶ್ವರಿ 100 ಕಿಮೀ ದೂರದಲ್ಲಿದ್ದು ಅಲ್ಲಿಂದ, ಪ್ರವಾಸಿಗರು ಚಾರಣದ ಮೂಲಕ ದೊಡ್ಡಮಾಕಳಿಯನ್ನು ತಲುಪಬಹುದು. ಭಾರತದಾದ್ಯಂತ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಂದ ಪ್ರವಾಸಿಗರು ಸುಲಭವಾಗಿ ಬೆಂಗಳೂರು ಸಿಟಿ ಜಂಕ್ಷನ್ ಮೂಲಕ ದೊಡ್ಡಮಾಕಳಿಯನ್ನು ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಚಾರಣ ಮಾರ್ಗದಲ್ಲಿ, ದೊಡ್ಡಮಾಕಳಿಯು ಭೀಮೇಶ್ವರಿಯಿಂದ 6 ಕಿಮೀ ಮೇಲ್ದಂಡೆಯಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭೀಮೇಶ್ವರಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ ಮತ್ತು ಇಲ್ಲಿ ವಿಶ್ವಾದ್ಯಂತ ಪ್ರಮುಖ ದೇಶಗಳ ಸಂಪರ್ಕವೂ ಇದೆ. ಯುರೋಪ್, ಏಷ್ಯಾ, ಅಮೆರಿಕಾ ಮತ್ತು ಮಧ್ಯ ಪ್ರಾಚ್ಯಗಳಿಂದ ಬರುವ ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿಗಳು ಮತ್ತು ಕ್ಯಾಬ್ಗಳ ಮೂಲಕ ದೊಡ್ಡಮಾಕಳಿಯನ್ನು ತಲುಪಬಹುದು. ದೇಶದ ಎಲ್ಲಾ ಪ್ರಮುಖ ಪಟ್ಟಣಗಳು ಮತ್ತು ನಗರಗಳು ಈ ವಿಮಾನ ನಿಲ್ದಾಣಕ್ಕೆ ಸಂಪರ್ಕ ಹೊಂದಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City