Search
  • Follow NativePlanet
Share
ಮುಖಪುಟ » ಸ್ಥಳಗಳು» ಭೀಮೇಶ್ವರಿ

ಭೀಮೇಶ್ವರಿ - ಜಲಪಾತಗಳ ನಡುವೆ

32

ಮಂಡ್ಯ ಜಿಲ್ಲೆಯ ಭೀಮೇಶ್ವರಿ ಗ್ರಾಮ ಸುಂದರ ಜಲಪಾತದಿಂದ ಹೆಸರಾಗಿದೆಯಷ್ಟೇ ಅಲ್ಲದೇ ಸುಂದರ ಪರಿಸರದಲ್ಲಿರುವ ನೈಸರ್ಗಿಕ ತಾಣವೆನಿಸಿಕೊಂಡಿದೆ. ಇಂದು ಭೀಮೇಶ್ವರಿ ಎಲ್ಲರ ಮೆಚ್ಚಿನ ಸಾಹಸಕ್ರೀಡಾ ಸ್ಥಳವಾಗಿ ರೂಪುಗೊಂಡಿದೆ. ಬೆಂಗಳೂರಿನಿಂದ 100 ಕಿ.ಮೀ. ದೂರದಲ್ಲಿರುವ ಭೀಮೇಶ್ವರಿ ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗವೆಂಬಂತಿದೆ.  ವಾರದ ರಜೆಯ ದಿನಗಳಲ್ಲಿ ಕಳೆಯಬಯಸುವವರಿಗೆ ಭೀಮೇಶ್ವರಿ ಉತ್ತಮ ಪ್ರವಾಸಿ ಸ್ಥಳವೆಂದೇ ಹೇಳಬಹುದು.

 

ಮೇಕೇದಾಟು ಮತ್ತು ಶಿವನಸಮುದ್ರ ಜಲಪಾತ ಹಲವೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಜೆಯ ಮಜ ಅನುಭವಿಸಲು ಬಂದವರಿಗೆ  ಜಲಪಾತಗಳಲ್ಲಿ ಕಾವೇರಿ ನದಿ ನೀರಿನಲ್ಲಿ ಮೀನು ಹಿಡಿಯುವ ಆನಂದ ಅನುಭವಿಸಬಹುದು. ಇಲ್ಲಿ ಮೀನುಗಾರಿಕೆ ಕಲಿಸುವ ಮತ್ತು ಮೀನುಗಾರಿಕೆ ಸ್ಪರ್ಧೆಗಳೂ ಕೂಡ ನಡೆಯುತ್ತ ವೆ.

 

ಸಾಹಸದ ಸ್ವರ್ಗ!

ಅಲ್ಲದೇ ಇಲ್ಲಿ ಪ್ರಕೃತಿ ಪ್ರೇಮಿಗಳಿಗೆ ಮತ್ತು ಸಾಹಸ ಕ್ರೀಡಾ ಪ್ರೇಮಿಗಳಿಗೆ ಸಾಕಷ್ಟು ಶಿಬಿರಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಹೀಗಾಗಿ ಭೀಮೇಶ್ವರಿಯನ್ನು ಪ್ರಕೃತಿ ಪ್ರಿಯರ ಸ್ವರ್ಗವೆಂದೇ ಕರೆಯುತ್ತಾರೆ.

ಈ ಶಿಬಿರದಲ್ಲಿ ಪಾಲ್ಗೊಳ್ಳುವುದಷ್ಟೇ ಅಲ್ಲ. ಪ್ರವಾಸಿಗರು ಇಲ್ಲಿನ ಅರಣ್ಯದಲ್ಲಿರುವ ಚಿರತೆ, ಜಿಂಕೆ, ಕರಡಿ, ಮೊಸಳೆ, ಪಕ್ಷಿ ಸಂಕುಲಗಳನ್ನೂ ಕೂಡ ನೋಡಬಹುದು.ಸುಂದರ ಬೆಟ್ಟ ಗುಡ್ಡಗಳಿಂದ ಮತ್ತು ನೈಸರ್ಗಿಕವಾಗಿ ರೂಪುಗೊಂಡ ಕೊಳ್ಳಗಳು ಮತ್ತು ಜಲಪಾತಗಳಿಂದ ಕೂಡಿದ ಈ ಪ್ರದೇಶ ಚಾರಣ ಪ್ರಿಯರಿಗೂ ಸಂತಸ ನೀಡುತ್ತದೆ. ಎಷ್ಟೋ ಜನರು ಚಾರಣ ಕಲಿಯಲು ಇಲ್ಲಿಗೆ ಬರುತ್ತಾರೆ.

ಭೀಮೇಶ್ವರಿಯಿಂದ 7 ಕಿ.ಮೀ.ದೂರದಲ್ಲಿರುವ ದೊಡ್ಡಮಕಲಿ ಪ್ರದೇಶದಲ್ಲಿ ಚಾರಣಿಗರು ತಮ್ಮ ಸಾಹಸ ಕ್ರೀಡೆಗಳನ್ನು ಮಾಡಲು ಆರಿಸಿಕೊಳ್ಳಬಹುದು. ಇಲ್ಲಿರುವ ಹರಿಯುವ ನದಿಯಲ್ಲಿ ಸಾಹಸ ಜಲಕ್ರೀಡೆಗಳನ್ನು ಮಾಡಬಹುದು. ಮೀನು ಹಿಡಿಯುತ್ತ ಸಂತಸದ ಕ್ಷಣಗಳನ್ನು ಕೂಡ ಇಲ್ಲಿ ಕಳೆಯುತ್ತ, ಪಕ್ಷಿಗಳು ಮೀನುಗಳನ್ನು ಭೇಟೆಯಾಡುವ ರಮಣೀಯ ದೃಶ್ಯವನ್ನು ನೋಡಬಹುದು.

ಭೀಮೇಶ್ವರಿಯಿಂದ 16 ಕಿ.ಮೀ. ಗಳ ದೂರದಲ್ಲಿರುವ ಗಲಿಬೋರ್ ಕೂಡ ಮೀನುಗಾರಿಕೆ ವಿಶೇಷ ಸ್ಥಳವೆಂದೇ ಹೆಸರಾಗಿದೆ. ಇಲ್ಲಿ ಹಲವಾರು ಮೀನುಗಾರಿಕೆ ಶಿಬಿರಗಳನ್ನು ನಾವು ನೋಡಬಹುದು. ಈ ಶಿಬಿರದಲ್ಲಿ ಮೀನು ಹಿಡಿದು ಸ್ಪರ್ಧೆ ಕೂಡ ಏರ್ಪಡಿಸಲಾಗುತ್ತದೆ. ಆದರೆ ಹಿಡಿದ ಮೀನನ್ನು ಮತ್ತೆ ನೀರಿಗೆ ಬಿಡುವ ನಿಯಮ ಇಲ್ಲಿದೆ.

ಇದರಿಂದ ಮೀನುಗಳ ಸಂತತಿ ಕೂಡ ಉಳಿಯುತ್ತದೆ ಅಲ್ಲದೇ ಮೀನುಗಾರಿಕೆಯಂತಹ ಜಲಕ್ರೀಡೆಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಶಿಬಿರದ ಆಯೋಜಕರು ಹೇಳುತ್ತಾರೆ.

ಕಾವೇರಿಯ ರಭಸದ ಅಲೆಗಳ ಜೊತೆ

ಕಾವೇರಿ ತೀರದ ದಂಡೆಯುದ್ದಕ್ಕೂ ಚಾರಣ ಮಾಡುತ್ತ ಪ್ರಕೃತಿಯ ಸೌಂದರ್ಯ ಸವಿಯುತ್ತ ಪ್ರವಾಸಿಗರು ಮನ ತಣಿಸಿಕೊಳ್ಳಬಹುದು.ಈ ಸುಂದರ ಪರಿಸರದಲ್ಲಿ ಚಾರಣಪ್ರಿಯರು ಮರೆಯಲಾಗದಂಥಹ ಸಾಹಸಗಳನ್ನು ಜೀವನಪೂರ್ತಿ ನೆನೆಸುವಂತಾಗುತ್ತದೆ. ಈ ನಿಸರ್ಗಧಾಮದಲ್ಲಿರುವ ಸುಂದರ ಕಾವೇರಿ ನದಿಯು ಜುಳು ಜುಳು ನಿನಾದದೊಂದಿಗೆ ಪ್ರಶಾಂತವಾಗಿ ಹರಿಯುತ್ತಿರುವಾಗ ಇಲ್ಲಿ ಈಜಾಡುತ್ತ ಮೈ ಮನ ತಣಿಸಿಕೊಳ್ಳಬಹುದು.

ಸಾಹಸ ಜಲಕ್ರೀಡೆ ಮಾಡುವವರು ಉದಾಹರಣೆಗೆ ರಾಫ್ಟಿಂಗ್, ಡೈವಿಂಗ್, ಕೇಯಕಿಂಗ್  ಮುಂತಾದವುಗಳನ್ನು ಇಲ್ಲಿರುವ ಸುಂದರ ನಯನ ಮನೋಹರ ಪ್ರಕೃತಿ ಸೌಂದರ್ಯದೊಂದಿಗೆ ಆನಂದಿಸಬಹುದು.

ಅಲ್ಲದೇ ಇಲ್ಲಿನ ಕಾಡಿನಲ್ಲಿರುವ ವನ್ಯಜೀವಿಗಳನ್ನು ನೋಡಲು ಕೂಡ ಪ್ರವಾಸಿಗರು ಸೂಕ್ತ ರಕ್ಷಣಾತ್ಮಕ ಸಾಧನಗಳೊಂದಿಗೆ ತೆರಳಬಹುದು. ಆದ್ದರಿಂದಲೇ ಭೀಮೇಶ್ವರಿಯು ಇವತ್ತಿನವರೆಗೂ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಭೀಮೇಶ್ವರಿ ಪ್ರಸಿದ್ಧವಾಗಿದೆ

ಭೀಮೇಶ್ವರಿ ಹವಾಮಾನ

ಉತ್ತಮ ಸಮಯ ಭೀಮೇಶ್ವರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭೀಮೇಶ್ವರಿ

  • ರಸ್ತೆಯ ಮೂಲಕ
    ಭೀಮೇಶ್ವರಿ ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಲವಾರು ಬಸ್ ಗಳ ಸೇವೆ ನೀಡುತ್ತಿದೆ. ಕಡಿಮೆ ವೆಚ್ಚದಲ್ಲಿ ಭೀಮೇಶ್ವರಿಗೆ ತಲುಪಲು ಈ ಬಸ್ ಗಳು ಉತ್ತಮವೆನ್ನಬಹುದು. ಇನ್ನು ಖಾಸಗಿ ಬಸ್ ಗಳು ಮತ್ತು ಟ್ಯಾಕ್ಸಿ ಗಳು ಬೆಂಗಳೂರಿನಿಂದ ಭೀಮೇಶ್ವರಿಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಭೀಮೇಶ್ವರಿಯಿಂದ ಬೆಂಗಳೂರು ರೈಲು ನಿಲ್ದಾಣವು 100 ಕಿ.ಮೀ. ದೂರದಲ್ಲಿದೆ. ಇಲ್ಲಿನ ರೈಲು ನಿಲ್ದಾಣದಿಂದ ದೇಶದೆಲ್ಲೆಡೆ ರೈಲು ಸಂಚಾರ ಸೇವೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭೀಮೇಶ್ವರಿಯಿಂದ 100 ಕಿ.ಮೀ. ದೂರದಲ್ಲಿದೆ. ವಿದೇಶಿ ಪ್ರವಾಸಿಗರು ಈ ವಿಮಾನ ನಿಲ್ದಾಣದಿಂದ ಭೀಮೇಶ್ವರಿಗೆ ಬರಲು ಟ್ಯಾಕ್ಸಿಗಳ ಸೇವೆ ನಿರಂತರವಾಗಿರುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri