ನಜ್ರುಲ್ ಗ್ರಂಥಾಗರ್ ಉದಯಪುರ್ ನಲ್ಲಿನ ಪ್ರಮುಖ ರಾಷ್ಟ್ರೀಯ ವಾಚನಾಲಯವಾಗಿದೆ. ಇದನ್ನು ಖ್ಯಾತ ಬೆಂಗಾಲಿ ಕವಿ, ಕಝಿ ನಜ್ರುಲ್ ಇಸ್ಲಾಂ ಅವರ ನೆನಪಿಗೋಸ್ಕರ ನಿರ್ಮಿಸಲಾಗಿದೆ. ಇಲ್ಲಿ ಕಾದಂಬರಿಗಳಿಂದ ಹಿಡಿದು ನೈಜ ಕೃತಿಗಳ ವರೆಗಿನ ಪುಸ್ತಕಗಳ ದೊಡ್ಡ ಭಂಡಾರವೇ ಇದೆ.
ನಜ್ರುಲ್ ಗ್ರಂಥಾಗರ್, ಮಾಣಿಕ್ಯ ವಂಶದ ಸಂಸ್ಕೃತಿಯ ಗರಿಮೆಯನ್ನು ಎತ್ತಿ ತೋರಿಸುವುದಲ್ಲದೆ, ತ್ರಿಪುರಾದ ಜನತೆಯ ಪುಸ್ತಕ ಹಾಗೂ ಸಾಹಿತ್ಯದ ಮೇಲಿನ ಪ್ರೀತಿಯನ್ನು ತೋರಿಸಿಕೊಡುತ್ತದೆ. ಇವತ್ತು ಇದು ಅಗರ್ತಲದಿಂದ ದೂರ, ಉದಯಪುರ್ ನ ಒಂದು ಓಣಿಯಲ್ಲಿ ಸ್ಥಿತಿಯಾಗಿದ್ದರೂ, ಪ್ರತೀದಿನ ಇಲ್ಲಿಗೆ ಬಹಳಷ್ಟು ಜನ ವಿದ್ಯಾರ್ಥಿಗಳು ಹಾಗೂ ಪಂಡಿತರು ಭೇಟಿ ನೀಡುತ್ತಾರೆ.
ಸ್ಥಳೀಯ ಸಂಸ್ಕೃತಿಯ ಬಗ್ಗೆ ತಿಳಿಯಲಿಚ್ಛಿಸುವ ಯಾತ್ರಿಗಳು ನಜ್ರುಲ್ ಗ್ರಂಥಾಗರ್ ಗೆ ಭೇಟಿ ನೀಡಬಹುದು. ಇದು ಬೆಂಗಾಲಿ ಕವಿಯಿಂದ ನಾಮಾಂಕಿತವಾದುದರಿಂದ, ಒಂದು ದೊಡ್ಡ ವಿಭಾಗವನ್ನು ಅವರ ಪುಸ್ತಕಗಳಿಗಾಗಿ ಮುಡಿಪಿರಿಸಲಾಗಿದೆ.


Click it and Unblock the Notifications