Search
  • Follow NativePlanet
Share
» »ಮನ ತಣಿಸುವ ದಕ್ಷಿಣ ಗಿರಿಧಾಮಗಳು

ಮನ ತಣಿಸುವ ದಕ್ಷಿಣ ಗಿರಿಧಾಮಗಳು

ಪ್ರವಾಸ ಮಾಡಲು ದಕ್ಷಿಣ ಭಾರತದಲ್ಲಿ ಏನಿಲ್ಲ ಹೇಳಿ? ಯಾನಕ್ಕೆ ಬೇಕಾದ ಎಲ್ಲಾಬಗೆಯ ತಾಣಗಳಿವೆ.

By divya

ಪ್ರವಾಸ ಮಾಡಲು ದಕ್ಷಿಣ ಭಾರತದಲ್ಲಿ ಏನಿಲ್ಲ ಹೇಳಿ? ಯಾನಕ್ಕೆ ಬೇಕಾದ ಎಲ್ಲಾಬಗೆಯ ತಾಣಗಳಿವೆ. ಹಸಿರುಸಿರಿಗೆ ಹೆಸರಾದ ಕೇರಳ, ಕಣ್ಮನ ಸೆಳೆಯುವ ಗೋವಾ ಸಮುದ್ರ ತೀರ, ಪವಿತ್ರ ಕ್ಷೇತ್ರಗಳಿಗೆ ಕರ್ನಾಟಕ, ತಮಿಳುನಾಡು, ರಾಜರ ಕಾಲವನ್ನು ನೆನಪಿಸುವ ಹಂಪಿ ಒಂದಾ? ಎರಡಾ? ಕಣ್ಮನ ಸೂರೆಗೊಳಿಸಲು ಬೇಕಾದಷ್ಟು ಪ್ರದೇಶಗಳಿವೆ. ತಮಿಳುನಾಡು ಪ್ರವಾಸೋದ್ಯಮ: ಕಿರುಪರಿಚಯ

ಹಾಗೆಯೇ ಪ್ರವಾಸದ ವಿಚಾರ ಮಾತನಾಡುವಾಗ ಬೆಟ್ಟಗುಡ್ಡಗಳ ಸಾಲನ್ನು ಮರೆಯುವ ಹಾಗಿಲ್ಲ. ಏಕೆಂದರೆ ದಕ್ಷಿಣ ಭಾರತದ ಪೂರ್ವ ಹಾಗೂ ಪಶ್ಚಿಮ ಭಾಗವೆರಡೂ ಗಿರಿಧಾಮಗಳಿಂದ ಕೂಡಿವೆ. ಹಾಗಾಗಿ ದಕ್ಷಿಣ ಭಾರತ ಗಿರಿಧಾಮಗಳಿಗೆ ಸ್ವರ್ಗ ಎಂದರೆ ತಪ್ಪಾಗಲಾರದು.

yalagiri

PC: Manvendra Bhangui

ಯಲಗಿರಿ
ಯಲಗಿರಿ ದಕ್ಷಿಣ ಭಾರತದ ಗಿರಿಧಾಮಗಳಿಗೆ ಒಂದು ಉತ್ತಮ ಪ್ರದೇಶ. ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿರುವ ಯಲಗಿರಿ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಬರುತ್ತದೆ. ಹಾಗಾಗಿ ಇದು ಬೆಂಗಳೂರು ಹಾಗೂ ತಮಿಳುನಾಡು ಜನರಿಗೆ ವಾರದ ರಜೆಯನ್ನು ಕಳೆಯಲು ಉತ್ತಮ ಪ್ರದೇಶ. ಹಸಿರು ಕಣಿವೆ, ಗುಲಾಬಿ ತೋಟಗಳನ್ನು ಹೊಂದಿರುವ ಈ ಗಿರಿಧಾಮ ಚಾರಣಕ್ಕೊಂದು ಸೂಕ್ತ ಜಾಗ. ಶ್ರೀಪುರಂ ಚಿನ್ನದ ದೇವಾಲಯ, ವೆಲ್ಲೂರ್

ಯರಕಾಡು
ಇದೊಂದು ಗಿರಿಧಾಮಗಳ ಚಿನ್ನ ಎಂದು ಹೇಳಬಹುದು. ತಮಿಳು ನಾಡಿನ ಸೇಲಂ ಜಿಲ್ಲೆಯಲ್ಲಿ ಬರುವ ಈ ತಾಣ ಹಚ್ಚಹಸಿರು ಕಾಡು, ನೋಡಲು ಸುಂದರ ದೃಶ್ಯಗಳನ್ನು ಹೊಂದಿದೆ. ಯರಕಾಡು ದಕ್ಷಿಣ ಭಾರತದ ಪೂರ್ವ ಘಟ್ಟದಲ್ಲಿ ಬರುತ್ತದೆ. ಹನಿಮೂನ್ ಟ್ರಿಪ್‍ಗೆ ಬರಲು ಯರಕಾಡು ಸೂಕ್ತ ಗಿರಿಧಾಮ.

ಕೊಟಗಿರಿ
ನೀಲಗಿರಿ ಬೆಟ್ಟದಲ್ಲಿ ಬರುವ ಪುಟ್ಟ ಬೆಟ್ಟ ಕೊಟಗಿರಿ. ಇದು ಪ್ರಸಿದ್ಧ ಪ್ರವಾಸ ಸ್ಥಳವಾದ ಊಟಿಯಿಂದ 30 ಕಿ.ಮೀ. ದೂರದಲ್ಲಿದೆ. ಹಸಿರಿನಿಂದ ಕೂಡಿರುವ ಈ ಜಾಗದಲ್ಲಿ ಚಾರಣ ಮಾಡಲು ಅನೇಕ ಜಾಗಗಳಿವೆ. ಚಾರಣ ಪ್ರಿಯರಿಗೆ ಸಾಹಸ ಮಾಡಲು ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ.

vegamon

PC: Vanischenu

ವಗಮೂನ್
ಕೇರಳದ ಒಂದು ಸುಂದರ ಹಾಗೂ ಪ್ರಸಿದ್ಧ ಪ್ರವಾಸ ಗಿರಿ ಎಂದರೆ ವಗಮೂನ್. ಇಲ್ಲಿರುವ ಶಿಲೆಗಳ ಬೆಟ್ಟ, ಆಕರ್ಷಕ ಜಲಧಾರೆ, ಹಸಿರು ಕಣಿವೆಗಳು ನಿಮ್ಮನ್ನು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಪೂರ್ವ ಘಟ್ಟದ ಒಂದು ಭಾಗವಾದ ಇದು ಕೊಟ್ಟಾಯಂ ಹಾಗೂ ಇಡುಕ್ಕಿಯ ಗಡಿ ಭಾಗದಲ್ಲಿ ಬರುತ್ತದೆ. ಈ ಜಾಗಕ್ಕೆ ಸ್ನೇಹಿತರು ಹಾಗೂ ಕುಟುಂಬದವರೊಡನೆಯೂ ಬರಬಹುದು. ಅಲ್ಲದೆ ಒಬ್ಬಂಟಿಯಾಗಿ ಪ್ರಕೃತಿ ಸೌಂದರ್ಯವನ್ನು ನೋಡುತ್ತೇನೆ ಎಂದು ಬಯಸುವವರು ಬರಬಹುದು. ಹೇಗೆ ಬಂದರೂ ಪ್ರವಾಸಿಗನ ಮನ ತಣಿಸುವ ಗುಣವನ್ನು ಈ ಗಿರಿಧಾಮ ಹೊಂದಿದೆ.

ಕೊಲ್ಲಿ ಬೆಟ್ಟಗಳು
ನಮಕ್ಕಲ್ ನಿಂದ 55 ಕಿ.ಮೀ. ದೂರದಲ್ಲಿರುವ ಈ ಗಿರಿಧಾಮ ನೋಡುಗರಿಗೆ ಖುಷಿಯನ್ನು ಕೊಡುತ್ತದೆ. ರಾಮಾಯಣ ಕಾಲದ ಕಥೆಯನ್ನು ಹೊಂದಿರುವ ಈ ಗಿರಿಧಾಮ ತನ್ನದೇ ಆದ ವಿಶೇಷತೆ ಹೊಂದಿದೆ. ನಗರ ಪ್ರದೇಶದ ಶಬ್ದ ಮಾಲಿನ್ಯದಿಂದ ಪಾರಾಗಿ ಹಸಿರು ಸಿರಿಯ ಸಂಗೀತ ಕೇಳಲು ಇದೊಂದು ರಮಣೀಯ ತಾಣ. ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ನಿಮ್ಮ ಬಳಿ ಇರಲಿ
ಈ ಗಿರಿಧಾಮಗಳಿಗೆ ಹೋಗುವಾಗ ಹಣ್ಣು, ತಿಂಡಿ, ನೀರು ಹಾಗೂ ಕ್ಯಾಮೆರಾಗಳನ್ನು ಮರೆಯದೇ ಕೊಂಡೊಯ್ಯಿರಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+