Search
  • Follow NativePlanet
Share
» »ಮಿಂಚುಹುಳಗಳ ಹಬ್ಬ ನೋಡಬೇಕಾದರೆ ಈ ಪುಟ್ಟ ಊರಿಗೆ ಹೋಗಿ

ಮಿಂಚುಹುಳಗಳ ಹಬ್ಬ ನೋಡಬೇಕಾದರೆ ಈ ಪುಟ್ಟ ಊರಿಗೆ ಹೋಗಿ

ಮಿಂಚು ಹುಳವನ್ನು ನೋಡಿದ್ದೀರಾ? ಸಣ್ಣ ಮಕ್ಕಳಿರುವಾಗ ರಾತ್ರಿ ಹೊತ್ತಿನಲ್ಲಿ ಕರಂಟ್ ಹೋದಾಗ ಮಿಂಚುಹುಳ ಹಾರುತ್ತಾ ಬರುವುದನ್ನು ನೀವು ನೋಡಿರುವಿರಿ. ಕತ್ತಲಲ್ಲಿ ಬೆಳಕನ್ನು ಚೆಲ್ಲುತ್ತಾ ಅತ್ತಿಂದಿತ್ತ ಹಾರಾಡುತ್ತಾ ಇರುವ ಮಿಂಚುಹುಳವನ್ನು ನೋಡಲು ಎಷ್ಟೊಂದು ಖುಷಿಯಾಗುತ್ತದಲ್ಲವೆ. ಇಂದು ನಾವು ಆ ಮಿಂಚುಹುಳಕ್ಕೆ ಸಂಬಂಧಿಸಿದ ಒಂದು ಊರಿನ ಬಗ್ಗೆ ತಿಳಿಸಲಿದ್ದೇವೆ.

ಪುರುಷ್‌ವಾಡಿ

ಪುರುಷ್‌ವಾಡಿ

ಹೆಚ್ಚಿನ ಜನರು ಸಾಹಸಮಯ ತಾಣಗಳು, ಸಂಸ್ಕೃತಿ, ಧರ್ಮ, ತಿನಿಸುಗಳನ್ನು ಹುಡುಕುತ್ತಾ ಪ್ರಯಾಣಿಸುತ್ತಾರೆ. ನೀವು ಹೊಸದೇನಾದರೂ ಅನ್ವೇಷಿಸಬೇಕು ಎನ್ನುವ ಕುತೂಹಲ ಹೊಂದಿದ್ದರೆ ಮಹಾರಾಷ್ಟ್ರದ ಪುರುಷ್‌ವಾಡಿಗೆ ಹೋಗಿ.
ಮಹಾರಾಷ್ಟ್ರದಲ್ಲಿ ಈ ಸಣ್ಣ ಗ್ರಾಮವು ಮುಂಬೈನಿಂದ ಸುಮಾರು ನಾಲ್ಕು ಗಂಟೆ ದೂರದಲ್ಲಿದೆ.

ಮಿಂಚುಹುಳಗಳ ಹಬ್ಬ

ಮಿಂಚುಹುಳಗಳ ಹಬ್ಬ

ಮಾನ್ಸೂನ್ ಮಳೆಗಾಲಕ್ಕೆ ಕಾಲಿಡುವ ಸಂದರ್ಭದಲ್ಲಿ ಪುರುಷ್‌ವಾಡಿಯು ಪ್ರತಿವರ್ಷ ಫಯರ್‌ಫ್ಲೈಸ್‌ ಫೇಸ್ಟಿವಲ್ ಅಂದರೆ ಮಿಂಚುಹುಳದ ಹಬ್ಬವನ್ನು ಆಯೋಜಿಸುತ್ತದೆ. ಕೇಳಲು ವಿಚಿತ್ರವೆನಿಸಬ ಹುದು. ಆದರೆ ಈ ಹಬ್ಬ ನೋಡಲು ಕಣ್ಣಿಗೆ ಹಬ್ಬದಂತಾಗುತ್ತದೆ.

ಯಾವಾಗ ಭೇಟಿ ನೀಡೋದು ಸೂಕ್ತ

ಯಾವಾಗ ಭೇಟಿ ನೀಡೋದು ಸೂಕ್ತ

ಮುಂಬೈ ಹಾಗೂ ಪುಣೆಯಿಂದ ಪುರುಷ್‌ವಾಡಿಗೆ ಸುಲಭವಾಗಿ ತಲುಪಬಹುದು. ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಈ ರಾಶಿ ರಾಶಿ ಮಿಂಚುಹುಳಗಳ ಹಾರುತ್ತಾ ಇರುತ್ತವೆ. ಇದನ್ನು ನೋಡುವಾಗ ಮರಗಿಡಗಳಿಗೆ ಮಿನಿಚರ್‌ ಲೈಟ್ ಹಾಕಿದಂತೆ ಭಾಸವಾಗುತ್ತದೆ. ಇಲ್ಲಿಗೆ ಭೇಟಿ ನೀಡಬೇಕಾದರೆ ಮೇ ಜೂನ್ ತಿಂಗಳು ಸೂಕ್ತವಾಗಿದೆ.

ಮಿಂಚುಹುಳಗಳ ಸೌಂದರ್ಯ

ಮಿಂಚುಹುಳಗಳ ಸೌಂದರ್ಯ

ಜೋರಾಗಿ ಮಳೆ ಸುರಿದರೆ ಮಿಂಚುಹುಳಗಳು ಸಾಯುತ್ತವೆ. ಆಗ ನಿಮಗೆ ಮಿಂಚುಹುಳಗಳ ಸೌಂದರ್ಯ ನೋಡಲು ಸಿಗುವುದಿಲ್ಲ. ಹಾಗಾಗಿ ಮಹಾರಾಷ್ಟ್ರಕ್ಕೆ ಮಾನ್ಸೂನ್ ಕಾಲಿಡುವ ಮುನ್ನವೇ ಪುರುಷ್‌ವಾಡಿಗೆ ಭೇಟಿ ನೀಡಿ ಮಿಂಚುಹುಳದ ಹಬ್ಬವನ್ನು ನೋಡಲು ಸಿಗೋದಿಲ್ಲ.

2000ಕ್ಕೂ ಹೆಚ್ಚಿನ ಜಾತಿಯ ಮಿಂಚುಹುಳಗಳನ್ನು ಕಾಣಬಹುದು

2000ಕ್ಕೂ ಹೆಚ್ಚಿನ ಜಾತಿಯ ಮಿಂಚುಹುಳಗಳನ್ನು ಕಾಣಬಹುದು

ನೀವು ಹಿಂದೆಂದೂ ಈ ರೀತಿಯ ಮಿಂಚುಳ್ಳಿಗಳನ್ನು ನೋಡಿರಲಿಕ್ಕಿಲ್ಲ. ಪುರುಷ್‌ವಾಡಿಯಲ್ಲಿ ಮೇ-ಜೂನ್ ತಿಂಗಳಲ್ಲಿ ಸುಮಾರು 2000ಕ್ಕೂ ಹೆಚ್ಚಿನ ಜಾತಿಯ ಮಿಂಚುಳ್ಳಿಗಳನ್ನು ಒಂದೆಡೆ ಸೇರಿಸಲಾಗುತ್ತದೆ. ಕಗ್ಗತ್ತಲೆಯಲ್ಲಿ ಈ ಮಿಂಚುಹುಳಗಳ ಲೈಟ್‌ ಪ್ರಕಾಶಮಾನವಾಗಿ ಕಂಗೊಳಿಸುತ್ತದೆ.

ಮರಾಠಿ ಫುಡ್‌ ಸವಿಯಬಹುದು

ಮರಾಠಿ ಫುಡ್‌ ಸವಿಯಬಹುದು

ನೀವು ಅಲ್ಲಿ ಕೆಲವು ಮರಾಠಿ ಫುಡ್‌ನ್ನೂ ಸವಿಯಬಹುದು. ಪೂರಣ್‌ಪೋಳಿ ಹಾಗೂ ಪಾವ್‌ ಬಾಜಿ ಸವಿಯಬಹುದು. ಪುರುಷ್‌ವಾಡಿಯಲ್ಲಿ ಕೆಲವು ಕ್ಯಾಂಪ್‌ಗಳಿವೆ ಅವು ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಇನ್ನು ಆ ಹಳ್ಳಿಯಲ್ಲಿ ಯಾವುದೇ ಐಷಾರಾಮಿ ಹೋಟೇಲ್‌ಗಳಿಲ್ಲ.

More News

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+