Search
  • Follow NativePlanet
Share
» »ಊಟಿಯಲ್ಲಿ ಏನೆಲ್ಲಾ ಫೇಮಸ್ ಸರಕುಗಳು ಗೊತ್ತ? ಮರೆಯದೇ ಖರೀದಿಸಿ

ಊಟಿಯಲ್ಲಿ ಏನೆಲ್ಲಾ ಫೇಮಸ್ ಸರಕುಗಳು ಗೊತ್ತ? ಮರೆಯದೇ ಖರೀದಿಸಿ

ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ.

ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ.

ಊಟಿ ಒಂದು ಅತ್ಯುತ್ತಮವಾದ ಪ್ರವಾಸಿತಾಣ. ಇಲ್ಲಿನ ವಾತಾವರಣ, ಪ್ರಕೃತಿ ಸೌಂದರ್ಯಕ್ಕೆ ಮರುಳಾಗದ ಜನರು ಯಾರು ಇಲ್ಲ. ಹೆಚ್ಚಾಗಿ ನವ ದಂಪತಿಗಳು ಇಲ್ಲಿಗೆ ಮಧುಚಂದ್ರಕ್ಕೆ ಭೇಟಿ ನೀಡುವ ತಾಣ ಎಂದು ಪ್ರಸಿದ್ಧಿಯನ್ನು ಪಡೆದಿದೆ. ದೇಶ, ವಿದೇಶಗಳಿಗೂ ಕೂಡ ಊಟಿ ಪ್ರಖ್ಯಾತಿ ಪಡೆದಿದೆ. ಊಟಿ ತಮಿಳುನಾಡು ರಾಜ್ಯದಲ್ಲಿದೆ. ಊಟಿ ಬೆಂಗಳೂರಿನಿಂದ ಸುಮಾರು 266 ಕಿ,ಮೀ ದೂರದಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಸುಮಾರು 7,500 ಅಡಿ ಎತ್ತರದಲ್ಲಿದೆ.

ಕೇವಲ ಪ್ರವಾಸಿ ದೃಷ್ಟಿಯಿಂದಲೇ ಅಲ್ಲದೇ ಇಲ್ಲಿ ಪ್ರವಾಸಿಗರು ಶಾಂಪಿಗ್ ಮಾಡಲು ಅಥವಾ ತಮ್ಮ ಪ್ರೀತಿ ಪಾತ್ರದವರಿಗೆ ಊಟಿಯಿಂದ ಏನಾದರು ತೆಗೆದುಕೊಂಡು ಉಡುಗೂರೆಯಾಗಿ ನೀಡಬೇಕು ಎಂದು ಕೊಳ್ಳುವವರು ತಪ್ಪದೇ ಇಲ್ಲಿನ ವಸ್ತಗಳನ್ನು ಕೊಂಡುಕೊಳ್ಳಿ.

ಇದೇ ಅಲ್ಲದೇ, ಊಟಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಅನೇಕ ಪದಾರ್ಥಗಳು, ವಸ್ತುಗಳು ಕೂಡ ದೊರೆಯುತ್ತದೆ. ಹಾಗಾದರೆ ಬನ್ನಿ ಆ ವಸ್ತು ಹಾಗು ಪದಾರ್ಥಗಳ ಬಗ್ಗೆ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ಹಿಲ್ ಹನಿ

1.ಹಿಲ್ ಹನಿ

PC:SOURCE

ಹನಿ ಎಂದರೆ ಜೇನುತುಪ್ಪ. ಸ್ಥಳೀಯವಾಗಿ ಇದು ಅತ್ಯಂತ ಪ್ರಸಿದ್ಧವಾದುದು ಎಂದೇ ಹೇಳಬಹುದು. ಹಿಲ್ ಹನಿಯನ್ನು "ವೈಲ್ಡ್ ಹನಿ" ಎಂದು ಕೂಡ ಕರೆಯುತ್ತಾರೆ. ಇಲ್ಲಿ ದೊರೆಯುವ ಜೇನುತುಪ್ಪವು ಅತ್ಯಂತ ಸ್ವಾಧಿಷ್ಟವಾಗಿದ್ದು, ಅತ್ಯಂತ ಬೇಡಿಕೆಯ ಸರಕೇ ಆಗಿದೆ. ಬೇರೆಡೆಗೆ ಜೇನು ಕಲಬೆರೆಕೆಯಿಂದ ಕೂಡಿರುವ ಸಂಭವವಿದೆ. ಆದರೆ ಊಟಿಯಲ್ಲಿ ದೊರೆಯುವ ಜೇನುತುಪ್ಪವು ನೂರಕ್ಕೆ ನೂರು ಪಟ್ಟು ಕಚ್ಚಾ ಆಹಾರವಾಗಿರುತ್ತದೆ. ಇಲ್ಲಿ ಮುಖ್ಯವಾಗಿ ಜೇನನ್ನು ನೈಸರ್ಗಿಕವಾಗಿ ಶೇಖರಿಸಲಾಗುತ್ತದೆ. ಇದು ಸಕ್ಕರೆಯ ಬದಲಾಗಿ ಇತರ ಸಂಸ್ಕರಿಸಿದ ಸಿಹಿ ಆಹಾರಕ್ಕೆ ಬಳಸಬಹುದು. ಇದನ್ನು ಹಣ್ಣುಗಳು, ಸ್ಯಾಂಡ್ವಿಚ್‍ಗಳಲ್ಲಿ, ಚಹಾ ಹಾಗು ಕಾಫಿಗಳಿಗೆ ಉತ್ತಮವಾದುದು.

ಊಟಿಯಲ್ಲಿನ ಕೆಲವು ಅಂಗಡಿಯಲ್ಲಿ ಸ್ವಾಧಿಷ್ಟವಾದ ಜೇನುತುಪ್ಪ ದೊರೆಯುತ್ತದೆ.

2.ನೀಲಗಿರಿ ತೈಲ

2.ನೀಲಗಿರಿ ತೈಲ

PC:SOURCE

ಯೂಕಲಿಪ್ಟಸ್ ಕುಟುಂಬದ ಎಲೆಗಳ ಮತ್ತು ಕೊಂಬೆಗಳ ಉಗಿ ಶುದ್ದೀಕರಣದಿಂದ ಹುಟ್ಟಿಕೊಂಡಿರುವ ತೈಲವೇ ನೀಲಗಿರಿ ತೈಲ. ಅನೇಕ ಶೀತಾ, ಸ್ನಾಯು ನೋವು, ಬೆನ್ನು ನೋವುಗಳ ಪರಿಹಾರಕ್ಕೆ ರಾಮಬಾಣವಾಗಿ ಈ ನೀಲಗಿರಿ ತೈಲವು ಕಾರ್ಯನಿರ್ವಹಿಸುತ್ತದೆ. ಇಲ್ಲಿನ ನೀಲಗಿರಿ ತೈಲವು ನೈಸರ್ಗಿಕವಾಗಿ ಅತ್ಯುತ್ತಮವಾದ ಹಾಗು ಯಾವುದೇ ಕಲಬೆರೆಕೆಯಿಂದ ಕೂಡಿರುವುದಿಲ್ಲ. ಹೀಗಾಗಿಯೇ ಊಟಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಇಲ್ಲಿ ಮಾರಾಟ ಮಾಡುವ ನೀಲಗಿರಿ ತೈಲವನ್ನು ಕೊಂಡುಕೊಂಡು ಹೋಗುತ್ತಾರೆ.

3.ಹೋಮ್ ಮೇಡ್ ಚಾಕೋಲೇಟ್‍ಗಳು

3.ಹೋಮ್ ಮೇಡ್ ಚಾಕೋಲೇಟ್‍ಗಳು

PC:SOURCE

ಊಟಿಯು ರುಚಿಕರವಾದ ಮನೆಯಲ್ಲಿ ತಯಾರಿಸಿದ ಚಾಕೋಲೇಟ್‍ಗಳಿಗೂ ಪ್ರಸಿದ್ಧಿ. ಚಾಕೋಲೇಟ್‍ಗಳೆಂದರೆ ಕೇವಲ ಚಿಕ್ಕವರಿಗೆ ಅಲ್ಲದೇ ದೊಡ್ಡವರಿಗೂ ಬಲು ಇಷ್ಟ. ನೇರವಾಗಿ ತಯಾರಕರಿಂದಲೇ ಚಾಕೋಲೇಟ್‍ಗಳನ್ನು ಕೊಂಡುಕೊಳ್ಳಬಹುದು. ವಿಧ-ವಿಧವಾದ ಚಾಕೋಲೇಟ್‍ಗಳು ಇಲ್ಲಿ ದೊರೆಯುತ್ತವೆ. ಊಟಿಯಲ್ಲಿ ಹೋಮ್ ಮೇಡ್ ಫ್ಯಾಕ್ಟರಿಗಳಿವೆ. ಅಲ್ಲಿಯೇ ಭೇಟಿ ನೀಡಿ ನೇರವಾಗಿ ಖರೀದಿಸಬಹುದು.

4.ಮಾರ್ಕೆಟ್ ರಸ್ತೆ

4.ಮಾರ್ಕೆಟ್ ರಸ್ತೆ

PC:SOURCE

ಊಟಿಯಲ್ಲಿ ಮಾರುಕಟ್ಟೆ ರಸ್ತೆ ಎಂದೇ ಇದೆ. ಅಲ್ಲಿ ತಜಾ ಹಣ್ಣುಗಳು, ಸ್ಟ್ರಾಬೆರ್ರಿ, ಮುಖ್ಯವಾಗಿ ಊಟಿ ಪ್ಲಮ್ಸ್, ಊಟಿ ಆಪಲ್ ಹಣ್ಣಿನ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ರುಚಿಕರವಾದ ಹಣ್ಣಿನ ಸ್ವಾದವನ್ನು ಅಸ್ವಾಧಿಸಿ ಖರೀದಿ ಮಾಡಬೇಕು ಎಂದಾದರೆ ತಪ್ಪದೇ ಒಮ್ಮೆ ಊಟಿಯಲ್ಲಿರುವ ಮಾರ್ಕೆಟ್ ರಸ್ತೆಗೆ ಭೇಟಿ ನೀಡಿ ಬನ್ನಿ.

5.ಕಾಫಿ

5.ಕಾಫಿ

PC:SOURCE

ಊಟಿಯಲ್ಲಿ ಮುಖ್ಯವಾಗಿ ಹಾಗು ಹೆಚ್ಚು ಮಾರಾಟವಾಗುವ ಕಾಫಿ ಎಲ್ಲಾರಿಗೂ ಪ್ರಿಯವಾದುದು. ಕಾಫಿ ದಿನನಿತ್ಯದ ಸರಕು. ಊಟಿಯ ಕಾಫಿ ತುಂಬ ಚೆನ್ನಾಗಿರುತ್ತೆ ಎಂದು ನೀವು ಕೇಳೆ ಇರುತ್ತೀರಾ ಅಲ್ಲವೇ? ಊಟಿಯ ಕೆಲವೊಂದು ಸ್ಥಳಗಳಲ್ಲಿ ಕಾಫಿಯನ್ನು ಟೇಸ್ಟ್ ಮಾಡಲು ಉಚಿತವಾಗಿ ನೀಡುತ್ತಾರೆ.

More News

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+