ಅರಣ್ಯ ಉದ್ಯಾನವನ ಮತ್ತು ಆಯುರ್ವೇದಿಕ್ ಉದ್ಯಾನವನವು ಕಾಡಿನ ಗಿಡಮೂಲಿಕೆಗಳ ಉದ್ಯಾನವನವೆಂದು ಸಹ ಕರೆಯಲ್ಪಡುತ್ತದೆ. ತೋರಣಮಲ್ ಗಿರಿಧಾಮದ ಈ ಸ್ಥಳದಲ್ಲಿ ವಿವಿಧ ಬಗೆಯ ಔಷಧೀಯ ಗಿಡಮೂಲಿಕೆಗಳನ್ನು ಮತ್ತು ಬಳ್ಳಿಗಳನ್ನು ಬೆಳೆಸಲಾಗಿದೆ. ಪ್ರವಾಸಿಗರು ಇಲ್ಲಿನ ವಿವಿಧ ಬಗೆಯ ಗಿಡಮೂಲಿಕೆಗಳನ್ನು ನೋಡಲು, ಯಾವ ಯಾವ ರೋಗಗಳಿಗೆ ಯಾವ ಸಸ್ಯ ಪರಿಹಾರವನ್ನು ಒದಗಿಸುತ್ತದೆ ಎಂದು ತಿಳಿಯಲು ಮತ್ತು ಗಿಡಮೂಲಿಕೆಗಳ ಇತರೆ ಪ್ರಯೋಜನಗಳ ಕುರಿತಾದ ಮಾಹಿತಿಯನ್ನು ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications