ಮುತ್ತುಪೇಟೈ ಅಥವ ಮುತ್ತುಪೇಟ್ ತಿರುವಾರೂರಿನ ಪಂಚಾಯತ್ ಪಟ್ಟಣ. ಇದು ಉಪ್ಪು ನೀರಿನ ಕೊಳಗಳು ಮತ್ತು ಮ್ಯಾಂಗ್ರೋವ್ ಗಿಡಗಳಿಗೆ ಪ್ರಸಿದ್ಧವಾದದ್ದು. ಇದು ಮೀನಿನ ಶಿಕಾರಿಗೆ ಹೇಳಿಮಾಡಿಸಿದ ಜಾಗ. ಇದು ಕಾವೇರಿ ಭೂಪ್ರದೇಶದ ದಕ್ಷಿಣ ಭಾಗದಲ್ಲಿದೆ. ಚೆನೈನಿಂದ 350 ಕಿಮೀ ದೂರದಲ್ಲಿದೆ. ಇದು ತಿರುತ್ತುರೈಪೂಂಡಿ ಮತ್ತು ಪತ್ತುಕೊಟೈಗೂ ಮಧ್ಯದಲ್ಲಿದೆ. ಭಾರತದ ಅತ್ಯಂತ ದೊಡ್ಡ ಮ್ಯಾಂಗ್ರೋವ್ ಕಾಡುಗಳಲ್ಲಿ ಒಂದಾದ ಅಲಾಯತಿ ಕಾಡು ಮುತ್ತುಪೇಟೈನಲ್ಲಿದೆ. ಇದು ಹವಳದ ಶಿಕಾರಿಗೆ ಕೂಡ ಹೇಳಿಮಾಡಿಸಿದ ಜಾಗ. ತಂಜಾವೂರು, ಕರೈಕಾಲ್ ಮತ್ತು ಕುಂಬಕೋಣಂಗಳಿಂದ ಇಲ್ಲಿಗೆ ಸುಲಭವಾಗಿ ಬರಬಹುದು.


Click it and Unblock the Notifications