ಮುದಿಕೊಂಡನ್ ಕೋದಂಡ ರಾಮರ್ ದೇವಾಲಯವು ಮಯಿಲದುತುರೈ ಮತ್ತು ತಿರುವರೂರಿನ ಮಧ್ಯದಲ್ಲಿದೆ. ಈ ದೇವಸ್ಥಾನ ಮತ್ತು ಇದರ ಸುತ್ತಲಿರುವ ಹಳ್ಳಿಯು 20 ಶತಮಾನಗಳಷ್ಟು ಹಳೆಯದು ಎಂದು ನಂಬಲಾಗುತ್ತದೆ. ಇದು ದಕ್ಷಿಣ ಭಾರತದ ಪುರಾತನ ದೇವಾಲಯಗಳಲ್ಲೊಂದು. ಇದು ವಿಷ್ಣುವಿನ ಅವತಾರವಾದ ರಾಮನ ದೇವಸ್ಥಾನ. ಇಲ್ಲಿ ರಾಮನನ್ನು ರಾಜನಾಗಿ ಚಿತ್ರಿಸಲಾಗಿದೆ. ರಾಮನನ್ನು ರಾಜನಾಗಿ ಚಿತ್ರಿಸಿರುವಂತಹ ಕೆಲವೇ ದೇಗುಲಗಳಲ್ಲಿ ಇದು ಕೂಡ ಒಂದು. ಭರದ್ವಾಜ ಮುನಿಯನ್ನು ತೃಪ್ತಿಪಡಿಸುವ ಸಲುವಾಗಿ ಇಲ್ಲಿ ರಾಮ ಕಿರೀಟಧಾರಿಯಾಗಿದ್ದಾನೆ. ಇಲ್ಲಿ ರಾಮನನ್ನು ಪೂಜಿಸಿದರೆ ಎಲ್ಲ ಪಾಪಗಳಿಂದ ಮುಕ್ತರಾಗಬಹುದು ಎಂಬ ನಂಬಿಕೆಯಿದೆ. ವರ್ಷಪೂರ್ತಿ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.


Click it and Unblock the Notifications