Search
  • Follow NativePlanet
Share
ಮುಖಪುಟ » ಸ್ಥಳಗಳು» ಸೂರಿಯಾನರ್ ಕೋಯಿಲ್

ಸೂರಿಯಾನರ‍್ ಕೋಯಿಲ್‌ - ಸೂರ್ಯದೇವರ ನವಗ್ರಹ ದೇವಸ್ಥಾನ

3

ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿರುವ ಸುಂದರ ಹಳ್ಳಿ ಸೂರಿಯಾನರ‍್ ಕೋಯಿಲ್‌. ನವಗ್ರಹ ದೇಗುಲಗಳಲ್ಲಿ ಒಂದಾದ ಸೂರ್ಯನಿಗೆ ಅರ್ಪಿತ ಶಿವಸೂರ್ಯನಾರಾಣ ದೇವಸ್ಥಾನ ಇಲ್ಲಿ ಅತ್ಯಂತ ಪ್ರಸಿದ್ಧ. ದೇವಸ್ಥಾನದಲ್ಲಿ ಸೂರ್ಯನ ಮೂರ್ತಿಯಿದೆ. ಈ ದೇವಸ್ಥಾನದಲ್ಲಿ ಇತರ ಗ್ರಹಗಳ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಈ ದೇವಸ್ಥಾನ ಅತ್ಯಂತ ಪ್ರಮುಖವಾದದ್ದು. ಭಕ್ತರು ತಮ್ಮ ರಾಶಿಗೆ ಅನುಗುಣವಾಗಿ ಐಶ್ವರ್ಯ ವೃದ್ಧಿಗೆ ಈ ದೇವಸ್ಥಾನಕ್ಕೆ ಬಂದು ಪೂಜೆ, ಹರಕೆ ಸಲ್ಲಿಸುತ್ತಾರೆ.

ಶಿವಸೂರ್ಯನಾರಾಯಣ ದೇವಸ್ಥಾನದ ಇತಿಹಾಸ ಮತ್ತು ವಾಸ್ತುಶಿಲ್ಪ

ಪಶ್ಚಿಮದೆಡೆಗೆ ದೇವಸ್ಥಾನದ ಮುಖವಿದ್ದು, ಎಲ್ಲ ಕಾಲದಲ್ಲೂ ಸೂರ್ಯನ ಬೆಳಕು ಬೀಳುವಂತೆ ದೇಗುಲ ನಿರ್ಮಾಣ ಮಾಡಲಾಗಿದೆ. ಕ್ರಿ.ಪೂ 1100 ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು ಎಂದು ಹೇಳಲಾಗಿದೆ. ಕುಲೋತ್ತುಂಗ ಚೋಳದೇವ ರಾಜನ ಆಡಳಿತದ ಅವಧಿಯಲ್ಲಿ ಈ ದೇವಸ್ಥಾನ ನಿರ್ಮಾಣವಾಯಿತು ಎಂದು ನಂಬಲಾಗಿದೆ. ಮೂರು ಸುತ್ತು ಮತ್ತು ಐದು ಗೋಪುರಗಳನ್ನು ಈ ದೇವಸ್ಥಾನವು ಹೊಂದಿದೆ. ಇಲ್ಲೊಂದು ಪವಿತ್ರವಾದ ಕೆರೆ ಇದ್ದು, ಇದನ್ನು ಸೂರ್ಯ ತೀರ್ಥಂ ಎಂದು ಕರೆಯಲಾಗಿದೆ. ಸೂರ್ಯ ಭಗವಾನ್‌ ಇಲ್ಲಿ ಗುರುಭಗವಾನ್‌ ನ ರೂಪ ತಾಳಿದ್ದಾನೆ. ತಿರುಮಂಗಲಕುಡಿಯಲ್ಲಿರುವ ಶಿವ ಮತ್ತು ಪಾರ್ವತಿಯರಿಗೆ ನಮಸ್ಕರಿಸಿದ ನಂತರವೇ ಸೂರ್ಯನಾರಾಯಣ ಮತ್ತು ಇತರ ನವಗ್ರಹಗಳಿಗೆ ನಮಸ್ಕರಿಸಬೇಕು ಎಂಬ ನಿಯಮ ಇಲ್ಲಿದೆ.

ಸೂರಿಯಾನರ‍್ ಕೋಯಿಲ್‌ ಸುತ್ತಲಿನ ಪ್ರವಾಸಿ ತಾಣಗಳು

ತಿರುಮಂಗಲಕುಡಿಯಲ್ಲಿರುವ ಪ್ರಾಣನಾದೇಶ್ವರರ‍್ ದೇವಸ್ಥಾನ ಮತ್ತು ಕಂಜಾನೂರಿನಲ್ಲಿರುವ ಅಗ್ನೀಶ್ವರರ‍್ ಸ್ವಾಮಿ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆಗಳು.

ಇತರ ನವಗ್ರಹ ದೇವಸ್ಥಾನಗಳಿಗೆ ಒಂದು ಭೇಟಿ

ಇತರೆ ಎಲ್ಲಾ ನವಗ್ರಹ ದೇವಸ್ಥಾನಗಳೂ ಸೂರಿಯಾನರ‍್ ಕೋಯಿಲ್‌ಗೆ ಸಮೀಪದಲ್ಲೇ ಇದೆ. ಪಾಂಡಿಚೆರಿಯ ತಿರುನಲ್ಲಾರ‍್ (ಶನಿದೇವರು), ಕಂಜಾನೂರ‍್ (ಶುಕ್ರ), ಅಲಂಗುಡಿ (ಗುರು), ತಿರುವೆಂಕಾಡು (ಬುಧ), ವೈದೀಶ್ವರನ್‌ ಕೋಯಿಲ್ (ಮಂಗಳ), ತಿರುನಾಗೇಶ್ವರಮ್‌ ಮತ್ತು ಕೀಳಪೆರುಂಪಲ್ಲಮ್‌ (ನಾಗ ದೇವರು) ಮತ್ತು ತಿಂಗಳೂರಿನಲ್ಲಿ (ಚಂದ್ರ) ನವಗ್ರಹ ದೇವಸ್ಥಾನಗಳಿವೆ.

ಸೂರಿಯಾನರ‍್ ಕೋಯಿಲ್‌ಗೆ ಹೋಗುವುದು ಹೇಗೆ

ಕುಂಭಕೋಣಂನಿಂದ 15 ಕಿ.ಮೀ ಮತ್ತು ಸ್ವಾಮಿಮಲೈನಿಂದ 21 ಕಿ.ಮೀ ದೂರದಲ್ಲಿ ಸೂರಿಯಾನರ‍್ ಕೋಯಿಲ್‌ ಇದೆ. ಮೈಲಾಡುದೊರೈನಿಂದ ಸೂರಿಯಾನರ್‌ ಕೋಯಿಲ್‌ಗೆ ಸುಮಾರು 20 ಕಿ.ಮೀ ದೂರ. ಇಲ್ಲಿಗೆ ಸಮೀಪದಲ್ಲಿ ಅಡುತುರೈ ರೈಲ್ವೆ ನಿಲ್ದಾಣವಿದೆ.

ಸೂರಿಯಾನರ್ ಕೋಯಿಲ್ ಪ್ರಸಿದ್ಧವಾಗಿದೆ

ಸೂರಿಯಾನರ್ ಕೋಯಿಲ್ ಹವಾಮಾನ

ಉತ್ತಮ ಸಮಯ ಸೂರಿಯಾನರ್ ಕೋಯಿಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೂರಿಯಾನರ್ ಕೋಯಿಲ್

  • ರಸ್ತೆಯ ಮೂಲಕ
    ರಸ್ತೆಯ ಮೂಲಕ ಸೂರಿಯಾನರ್‌ ಕೋಯಿಲ್‌ಗೆ ಸಾಗಲು ತಿರುಮಂಗಲಕುಡಿ ಬಸ್‌ ನಿಲ್ದಾಣದಲ್ಲಿ ಇಳಿದುಕೊಳ್ಳಬೇಕು. ಅಲ್ಲಿಂದ ಸುಮಾರು 2 ಕಿಮೀ ದೂರ ನಡೆದರೆ ಸೂರಿಯಾನರ‍್ ಕೋಯಿಲ್‌ ಸಿಗುತ್ತದೆ. ಪ್ರವಾಸಿಗರು ಅಡುತುರೈ, ತಿರುಪಣಂತಲ್‌ ಮತ್ತು ಅನೈಕಾರೈ ಮೂಲಕವೂ ಇಲ್ಲಿಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೂರಿಯಾನರ‍್ ಕೋಯಿಲ್‌ಗೆ ಸಮೀಪದಲ್ಲಿ ಅಡುತುರೈ ರೈಲ್ವೆ ನಿಲ್ದಾಣವಿದೆ. ಅಡುತುರೈಗೆ ಸಮೀಪದ ನಗರಗಳೆಂದರೆ ಮಯಿಲಾಡುತುರೈ ಮತ್ತು ಕುಂಭಕೋಣಂ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸೂರಿಯಾನರ‍್ ಕೋಯಿಲ್‌ ತಂಜಾವೂರ‍್ ಜಿಲ್ಲೆಯಲ್ಲಿದ್ದು ಕುಂಭಕೋಣಂನಿಂದ 15 ಕಿ.ಮೀ ದೂರದಲ್ಲಿದೆ. ತಂಜಾವೂರಿನಿಂದ 58 ಕಿ.ಮೀ ದೂರದಲ್ಲಿರುವ ತಿರುಚ್ಚಿ ವಿಮಾನ ನಿಲ್ದಾಣವೇ ಇಲ್ಲಿಗೆ ಅತ್ಯಂತ ಸಮೀಪದ್ದು. ತಿರುಚಿರಾಪಳ್ಳಿಗೆ ಚೆನ್ನೈನಿಂದ ನೇರ ವಿಮಾನ ಸಂಪರ್ಕವಿದೆ. ಸಮೀಪದಲ್ಲಿರುವ ಇತರ ವಿಮಾನ ನಿಲ್ದಾಣಗಳೆಂದರೆ ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣ. ಭಾರತದ ಇತರೆ ನಗರಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat