ಸ್ಪಿತಿಗೆ ಸಮೀಪದ ವಿಮಾನ ನಿಲ್ದಾಣ ಭುಂತರ್. ಇದು ಶಿಮ್ಲಾ ಹಾಗೂ ದಿಲ್ಲಿ ಸೇರಿದಂತೆ ಹತ್ತು ಹಲವು ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ಇಲ್ಲಿ ಬರಬೇಕಾದರೆ ದಿಲ್ಲಿಯಿಂದ ಭುಂತರ್ಗೆ ಬಂದು ಬರಬಹುದು. ಉತ್ತಮ ಸಂಪರ್ಕ ಸೌಲಭ್ಯ ಇಲ್ಲಿಂದಿದೆ. ವಿಮಾನ ನಿಲ್ದಾಣದಿಂದ ಬಾಡಿಗೆ ಕಾರು ಪಡೆದು ಸ್ಪಿತಿಗೆ ಆರಾಮವಾಗಿ ತಲುಪಬಹುದಾಗಿದೆ.