Search
  • Follow NativePlanet
Share
ಮುಖಪುಟ » ಸ್ಥಳಗಳು» ಸಿಂಹಾಚಲಂ

ಸಿಂಹಾಚಲಂ : ನರಸಿಂಹನ ನಾಡು

10

ಸಿಂಹಾಚಲಂ ಎನ್ನುವುದು ದಕ್ಷಿಣ ಭಾರತ ಒಂದು ರಾಜ್ಯವಾದ ಆಂಧ್ರ ಪ್ರದೇಶದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಹಳ್ಳಿಯು ವಿಶಾಖಪಟ್ಟಣಂ ( ವೈಜಾಗ್) ಗೆ ಅತ್ಯಂತ ಸಮೀಪದಲ್ಲಿದೆ. ಈ ಸ್ಥಳವು ವಿಷ್ಣು ಭಕ್ತರಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ. ಸಿಂಹಾಚಲಂ  ನರಸಿಂಹನಿಗಾಗಿ ಸಮರ್ಪಿಸಲಾಗಿರುವ ಹದಿನೆಂಟು ದೇಗುಲಗಳಲ್ಲಿ ಒಂದೆಂದು ಖ್ಯಾತಿ ಪಡೆದಿದೆ. ನರಸಿಂಹ ಎಂಬುದು ಅರ್ಧಭಾಗ ಮಾನವ ಮತ್ತು ಇನ್ನರ್ಧ ಭಾಗ ಸಿಂಹದಂತಿರುವ ವಿಷ್ಣುವಿನ ಅವತಾರ ರೂಪವಾಗಿದೆ. ದೇಗುಲದ ಅರ್ಚಕರು ನರಸಿಂಹನ ವಿಗ್ರಹವನ್ನು ಸದಾ ಚಂದನದಿಂದ ಮುಚ್ಚಿರುತ್ತಾರೆ. ಈ ವಿಗ್ರಹವು ತ್ರಿಭಂಗ ಆಸನದಲ್ಲಿದ್ದು, ಸಿಂಹದ ರುಂಡ ಮತ್ತು ಮನುಷ್ಯನ ಮುಂಡವನ್ನು ಹೊಂದಿದೆ.

ಪ್ರಾಚೀನ ಪ್ರಭುತ್ವದ ಕುರುಹುಗಳು

ಯಾರು ಬೇಕಾದರು ಈ ದೇವಾಲಯ ಎಷ್ಟು ಹಳೆಯದು ಎಂದು ಹೇಳಬಹುದು. ಆದರೆ ಇಲ್ಲಿರುವ ಶಾಸನವು ಈ ದೇವಾಲಯವು ಕ್ರಿ. ಶ 1098ರಲ್ಲಿ ಚೋಳರ ರಾಜ ಕುಲೋತ್ತುಂಗನ ಕಾಲದಲ್ಲಿ ನಿರ್ಮಾಣಗೊಂಡದ್ದು ಎಂದು ಹೇಳುತ್ತದೆ. ಮತ್ತೊಂದು ಶಾಸನವು ಕ್ರಿ.ಶ 1137 ರಿಂದ 1156 ರವರೆಗೆ ಕಳಿಂಗದ ರಾಣಿ ಇಲ್ಲಿ ನೆಲೆಗೊಂಡಿದ್ದಳು ಎಂಬ ಅಂಶವನ್ನು ನಮಗೆ ತಿಳಿಸುತ್ತದೆ. ಈ ಎಲ್ಲ ಅಂಶಗಳು ಕೇವಲ ಈ ದೇವಾಲಯದ ಪ್ರಾಚೀನತೆಯನ್ನು ತಿಳಿಸುತ್ತವೆ. ಆದರೆ ಇತಿಹಾಸಕಾರರಿಗೆ ಈ ಶಾಸನಗಳು ಆ ಕಾಲದ ಪ್ರಮುಖ ಐತಿಹಾಸಿಕ ಘಟನೆಗಳನ್ನು ಲೆಕ್ಕ ಹಾಕಲು ನೆರವಾಗುತ್ತಿವೆ. ಈ ದೇವಾಲಯದ ಗೋಡೆಗಳ ಮೇಲೆ ಇರುವ ಶಾಸನಗಳು ತೆಲುಗು ಮತ್ತು ಒರಿಯಾ ಭಾಷೆಗಳಲ್ಲಿವೆ. ಅಲ್ಲದೆ ಈ ದೇವಾಲಯದ ವಾಸ್ತು ಶೈಲಿಯಲ್ಲಿಯೂ ಸಹ ಈ ಎರಡು ರಾಜ್ಯಗಳ ಶೈಲಿಯ ಮಿಶ್ರಣವನ್ನು ನಾವು ಕಾಣಬಹುದು. ಗಂಗಾಧರ ಎನ್ನುವ ಪವಿತ್ರ ಸ್ನಾನದ ಕಲ್ಯಾಣಿ ಸಹ ಈ ಗುಡ್ಡದ ಮೇಲೆ ನೆಲೆಗೊಂಡಿದೆ.

ಈ ದೇವರ ಸುತ್ತ ಇರುವ ಕುತೂಹಲಕಾರಿ ದಂತಕಥೆ

ಈ ಹಳ್ಳಿಗೆ ಒಂದು ಕುತೂಹಲಕಾರಿ ದಂತಕತೆಯೊಂದು ಅಂಟಿಕೊಂಡಿದೆ. ಅದೇನೆಂದರೆ ಮುಸ್ಲಿಂ ದಾಳಿಕೋರರು ಈ ಪ್ರದೇಶವನ್ನು ಲೂಟಿ ಮಾಡಲು ಇಲ್ಲಿಗೆ ಬಂದಾಗ ಕುಮಾರನಾಥ ಎಂಬ ಕವಿಯು ಅತ್ಯಂತ ಭಕ್ತಿಯಿಂದ ನರಸಿಂಹಸ್ವಾಮಿಯನ್ನು ತಮ್ಮನ್ನು ರಕ್ಷಿಸುವಂತೆ ಬೇಡಿಕೊಂಡನಂತೆ. ಆಗ ಆತನ ಆಶಯದಂತೆ ಸ್ವಾಮಿಯು ಒಂದು ದೊಡ್ಡ ಕಾಪ್ಪರ್ ಹಾರ್ನೆಟ್ (ಜೇನು ಹುಳುವಿನ ಹಾಗೆ ಕೊಂಡಿಯುಳ್ಳ ಒಂದು ಬಗೆಯ ಕೀಟ) ಹಿಂಡನ್ನು ಕಳುಹಿಸದನಂತೆ, ಅವು ದಾಳಿಕೋರರ ಮೇಲೆ ಆಕ್ರಮಣ ಮಾಡಿ ಅವರನ್ನು ಊರಿನಿಂದ ಓಡಿಸಿದವಂತೆ. ಈ ರೀತಿಯಾಗಿ ಸಿಂಹಾಚಲಂನ ಜನರ ಪ್ರಾಣವು ಉಳಿಯಿತಂತೆ. ಈ ಸ್ಥಳವು ಇಲ್ಲಿರುವ ಮೂಲ ದೇವರಾದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಹವಾಮಾನ, ಸಂಪರ್ಕ ಮತ್ತು ಭೇಟಿ ಕೊಡಲು ಅತ್ಯುತ್ತಮ ಅವಧಿ

ಈ ಪ್ರಾಂತ್ಯವು ಅತಿಯಾಗಿ ಸುಡುವ ಬೇಸಿಗೆಯನ್ನು ಹೊಂದಿದ್ದರು, ಹಿತವಾದ ಚಳಿಗಾಲವು ಪ್ರವಾಸಿಗರಿಗೆ ಇಲ್ಲಿ ಸುತ್ತಾಡಲು ಮತ್ತು ಪ್ರವಾಸಿ ತಾಣಗಳನ್ನು ನೋಡಲು ಅತ್ಯುತ್ತಮ ಅವಕಾಶವನ್ನೊದಗಿಸುತ್ತದೆ. ದಕ್ಷಿಣ ಭಾರತದ ಯಾವುದೇ ಪ್ರಮುಖ ನಗರದಿಂದ ಮತ್ತು ಪಟ್ಟಣದಿಂದ ರಸ್ತೆಯ ಮೂಲಕ ನೀವು ಸಿಂಹಾಚಲಕ್ಕೆ ತಲುಪಬಹುದು. ಈ ಊರು ಹೊಂದಿರುವ ಅತ್ಯುತ್ತಮ ಸಂಪರ್ಕ ವ್ಯವಸ್ಥೆಯು ಸುಮ್ಮನೆ ಅಲೆದಾಡುವವರ ವಲಯದಲ್ಲಿ ಖ್ಯಾತಿಯನ್ನುಂಟು ಮಾಡಿದೆ.

ಸಿಂಹಾಚಲಂ ಪ್ರಸಿದ್ಧವಾಗಿದೆ

ಸಿಂಹಾಚಲಂ ಹವಾಮಾನ

ಉತ್ತಮ ಸಮಯ ಸಿಂಹಾಚಲಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಿಂಹಾಚಲಂ

  • ರಸ್ತೆಯ ಮೂಲಕ
    ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ರಾಜ್ಯದ ಎಲ್ಲ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ಸಿಂಹಾಚಲಕ್ಕೆ ಹೋಗಿ ಬರುತ್ತಿರುತ್ತವೆ. ಇದರೊಂದಿಗೆ ನೆರೆಯ ತಮಿಳು ನಾಡು ಮತ್ತು ಕರ್ನಾಟಕ ರಾಜ್ಯದಿಂದಲು ಬಸ್ಸುಗಳು ಹೈದರಬಾದ್ ಮತ್ತು ವೈಜಾಗ್‍ಗೆ ಬರುತ್ತಿರುತ್ತವೆ. ಪ್ರಯಾಣಿಕರು ಅಲ್ಲಿಂದ ಸಿಂಹಾಚಲಕ್ಕೆ ಮತ್ತೊಂದು ಬಸ್ ಹಿಡಿದು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಂಹಾಚಲದಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ವಿಶಾಖ ಪಟ್ಟಣ ಅಥವಾ ವೈಜಾಗ್‍ನಲ್ಲಿ ನೆಲೆಸಿದೆ. ವೈಜಾಗ್‍ಗೆ ದೇಶದ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ರೈಲುಗಳು ಬಂದು ಹೋಗುತ್ತಿರುತ್ತವೆ. ಈ ನಿಲ್ದಾಣವು ದೇಶದ ಇನ್ನಿತರ ನಗರಗಳ ನಿಲ್ದಾಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ನೀವು ಬಸ್ ಅಥವಾ ಬಾಡಿಗೆ ಟ್ಯಾಕ್ಸಿಯ ಮೂಲಕ ಸಿಂಹಾಚಲವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಿಶಾಖ ಪಟ್ಟಣ ವಿಮಾನ ನಿಲ್ದಾಣವು ಸಿಂಹಾಚಲಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದನ್ನು ವೈಜಾಗ್ ವಿಮಾನ ನಿಲ್ದಾಣ ಎಂದು ಸಹ ಕರೆಯುತ್ತಾರೆ. ಹೈದರಾಬಾದ್, ದೆಹಲಿ, ಮುಂಬಯಿ, ಕೊಲ್ಕೊತ್ತಾ, ತಿರುವನಂತಪುರಂ ಮತ್ತು ಚೆನ್ನೈ ಗಳಂತಹ ದೇಶದ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ವಿಮಾನಗಳು ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಈ ವಿಮಾನ ನಿಲ್ದಾಣವು ಸಿಂಹಾಚಲದಿಂದ 16 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣದಿಂದ ನೀವು ಸಿಂಹಾಚಲಕ್ಕೆ ಕ್ಯಾಬ್‍ಗಳನ್ನು ಬಾಡಿಗೆಗೆ ಪಡೆದು ತಲುಪಬಹುದು. ಅವುಗಳ ಬಾಡಿಗೆ ವೆಚ್ಚ 500 ರೂಪಾಯಿ ಆಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri

Near by City