ಸರಿಸ್ಕಗೆ ಭೇಟಿಕೊಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಅತ್ಯುತ್ತಮವಾಗಿದೆ. ಏಕೆಂದರೆ ಈ ಸಮಯದಲ್ಲಿ ತಂಪಾದ ಮತ್ತು ಆಹ್ಲಾದಕರವಾದ ಹವಾಗುಣವಿರುತ್ತದೆ. ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ಗಂಗೌರ್ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಗಳಿಂದ ಆಚರಿಸುತ್ತಾರೆ. ಇದು ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.
(ಏಪ್ರಿಲ್ ನಿಂದ ಮೇ) ; ಸರಿಸ್ಕವು ಬೇಸಿಗೆಯಲ್ಲಿ ವಿಪರೀತವಾದ ಬಿಸಿಲಿನಿಂದ ಕೂಡಿರುತ್ತದೆ. ಉಷ್ಣಾಂಶವು ಈ ಸಮಯದಲ್ಲಿ ಇಲ್ಲಿ 47° ಸೆಲ್ಶಿಯಸ್ ವರೆಗೆ ತಲುಪುವುದಲ್ಲದೆ, ಬಿಸಿಲಿನಿಂದ ಸೂರ್ಯಾಘಾತ ( ಸನ್ ಸ್ಟ್ರೋಕ್) ವನ್ನು ಸಹ ಉಂಟು ಮಾಡುತ್ತದೆ. ಪ್ರವಾಸಿಗರು ಇಲ್ಲಿಗೆ ಈ ಕಾಲದಲ್ಲಿ ಬರುವುದನ್ನು ತಡೆಯುವುದು ಉತ್ತಮ.
(ಜೂನ್ ನಿಂದ ಸೆಪ್ಟಂಬರ್) ; ಸರಿಸ್ಕವು ಮಧ್ಯಮ ಪ್ರಮಾಣದ ಮಳೆಯನ್ನು ಜೂನ್ ನಿಂದ ಸೆಪ್ಟಂಬರ್ ವರೆಗೆ ಪಡೆಯುತ್ತದೆ. ಪ್ರವಾಸಿಗರಿಗೆ ಇದು ಇಲ್ಲಿನ ಸುಡುವ ಬಿಸಿಲಿನಿಂದ ಸ್ವಲ್ಪ ಮಟ್ಟಿನ ವಿಶ್ರಾಂತಿಯನ್ನೊದಗಿಸುತ್ತದೆ. ಆದರು ಸಹ ಇಲ್ಲಿ ಈ ಕಾಲದಲ್ಲಿ ಆರ್ದ್ರತೆಯು ಹೆಚ್ಚಾಗಿದ್ದು, ಪ್ರವಾಸಿಗರು ಹೊರಾಂಗಣ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಇದು ಅಸೌಖ್ಯವನ್ನುಂಟು ಮಾಡುತ್ತದೆ.
(ಡಿಸೆಂಬರ್ ನಿಂದ ಫೆಬ್ರವರಿ) ; ಸರಿಸ್ಕವು ಚಳಿಗಾಲದಲ್ಲಿ ತಂಪಾದ ಹವಾಗುಣವನ್ನು ಹೊಂದಿರುತ್ತದೆ. ಆಗ ಇಲ್ಲಿನ ಕನಿಷ್ಠ ಉಷ್ಣಾಂಶವು 4°ಸೆಲ್ಶಿಯಸ್ ಇರುತ್ತದೆ. ಹೀಗಾಗಿ ಈ ಸಮಯವು ಇಲ್ಲಿಗೆ ಭೇಟಿಕೊಡಲು ಹೇಳಿ ಮಾಡಿಸಿರುತ್ತದೆ.