ಸರನ್: ಜಾತ್ರೆಗಳ ಸಂಭ್ರಮದ ಊರು!

ಮುಖಪುಟ » ಸ್ಥಳಗಳು » ಸರನ್ » ಮುನ್ನೋಟ

ಬಿಹಾರದ 38 ಜಿಲ್ಲೆಗಳಲ್ಲಿ ಸರನ್ ಕೂಡ ಒಂದು. ಸರನ್ ಒಂದು ದೊಡ್ಡ ವಿಭಾಗ. ಇದರಲ್ಲಿ ಚಪ್ಪರ್ ಎನ್ನುವ ಭಾಗದಲ್ಲಿ ಸರನ್ ನ ವಸತಿ. ಸರನ್ನಲ್ಲಿ ಮನುಷ್ಯ ಬದುಕಿನ ಅಂಗಗಳಾದ ಆಧ್ಯಾತ್ಮ, ಸಂಸ್ಕೃತಿ ಮತ್ತು ಜಾನಪದವನ್ನು ಕಾಣಬಹುದು. ಸರನ್ ಬಿಹಾರಿನ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಜೀವನ ಶೈಲಿಯನ್ನು ವಿಜೃಂಭಿಸುತ್ತದೆ. ಸರನ್ ಪ್ರವಾಸಿಗರಿಗೆ ಐತಿಹಾಸಿಕ, ಧಾರ್ಮಿಕ ಮತ್ತು ಪುರಾತತ್ವ ಸ್ಥಳಗಳನ್ನು ಒದಗಿಸುತ್ತದೆ.

ಇಲ್ಲಿ ಆಮಿ, ಗೌತಮ ಆಸ್ಥಾನ, ಸಿಲ್ಹೌರಿ, ಧೋರ್ಥ ಆಶ್ರಮ, ಚಿರಾಂದ್ ಮತ್ತು ಹಸನ್ಪುರಗಳಿವೆ. ಸರನ್ನಲ್ಲಿ ಕಾಳಿ ಮತ್ತು ಶಿವನ ಮಂದಿರಗಳಿವೆ. ಸರನ್ನಲ್ಲಿ ಭೇಟಿ ನೀಡಲೇಬೇಕಾದ ಮುಖ್ಯ ಸ್ಥಳವೆಂದರೆ ಸೊನೆಪುರ. ಇಲ್ಲಿ ನಡೆಯುವ ಜಾನುವಾರು ಜಾತ್ರೆ ವಿಶ್ವಪ್ರಸಿದ್ಧವಾದದ್ದು. ನವೆಂಬರ್ನಲ್ಲಿ ನಡೆಯುವ ಈ ಜಾತ್ರೆಗೆ ದೇಶ ವಿದೇಶಗಳಿಂದ ಜನ ಬರುತ್ತಾರೆ. ಸರನ್ನಲ್ಲಿ ಉತ್ತಮ ಸಾರಿಗೆ ಮತ್ತು ಮಾಧ್ಯಮ ಸೌಲಭ್ಯಗಳಿವೆ. ಈ ಜಾತ್ರೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸರನ್ ಪ್ರವಾಸೋದ್ಯಮವನ್ನು ಪ್ರಸಿದ್ಧಗೊಳಿಸಿದೆ.

ತಲುಪುವುದು ಹೇಗೆ?

ಬಿಹಾರ ಸರ್ಕಾರವು ಪ್ರವಾಸಿಗರಿಗೆ ಎಲ್ಲ ರೀತಿಯ ಸಾರಿಗೆ ಸೌಲಭ್ಯಗಳನ್ನು ಒದಗಿಸಿದೆ.

ಪ್ರವಾಸಕ್ಕೆ ಸೂಕ್ತ ಸಮಯ

ಸರನ್ನಲ್ಲಿ ಸಾಧಾರಣ ವಾತಾವರಣವಿರುತ್ತದೆ. ಫೆಬ್ರವರಿಯಿಂದ ಮೇವರೆಗೆ ಹೆಚ್ಚಿನ ಉಷ್ಣತೆಯಿರುತ್ತದೆ. ಚಳಿಗಾಲವು ಡಿಸಂಬರ್ ಮತ್ತು ಜನವರಿವರೆಗಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ ಜೂನ್-ಅಕ್ಟೋಬರ್. 

Please Wait while comments are loading...