ಕರ್ಪೊ-ಖಾರ್ ಸಮಾಧಿಯು ಜಮ್ಮು- ಕಾಶ್ಮೀರದಲ್ಲಿರುವ ಸಂಕೂನ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಧಾರ್ಮಿಕ ಕೇಂದ್ರವು ಕರ್ಪೊ - ಖಾರ್ ಗ್ರಾಮದಲ್ಲಿ ನೆಲೆಗೊಂಡಿದೆ. ಇಲ್ಲಿರುವ ಸಯದ್ ಮೀರ್ ಹಶಿಮ್‍ರವರ ಸಮಾಧಿಗೆ ಪ್ರಾರ್ಥನೆ ಸಲ್ಲಿಸಲು ದೇಶದ ನಾನಾ ಭಾಗಗಳಿಂದ ಭಕ್ತಾಧಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಇವರು ಕಾಶ್ಮೀರಕ್ಕೆ ಆಹ್ವಾನಿಸಲ್ಪಟ್ಟ ಖ್ಯಾತ ಸಂತ ಮತ್ತು ವಿದ್ವಾಂಸರಾಗಿದ್ದರು. ಇವರು 16ನೇ ಶತಮಾನದಲ್ಲಿ ಬೌದ್ಧ ಧರ್ಮದಿಂದ ಇಸ್ಲಾಮಿಗೆ ಮತಾಂತರಗೊಂಡ ರಾಜ ಥಿ-ನಂಗ್ಯಾಲ್‍ರವರ ಕೋರಿಕೆಯ ಮೇರೆಗೆ ಕಾಶ್ಮೀರಕ್ಕೆ ಭೇಟಿಕೊಟ್ಟರು.


Click it and Unblock the Notifications