Search
  • Follow NativePlanet
Share
ಮುಖಪುಟ » ಸ್ಥಳಗಳು» ರುಖಾಲಾ

ರುಖಾಲಾ - ಸಾಹಸಕ್ರಿಯೆಯನ್ನು ಉತ್ತೇಜಿಸುವ ತಾಣ

12

ರುಖಾಲಾ ಎಂಬುದು ಹಿಮಾಚಲ್ ಪ್ರದೇಶದಲ್ಲಿರುವ ಕೋಟ್ ಖಾಯಿ ಪಟ್ಟಿಯ ಹೃದಯ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಅಲ್ಲದೆ ಇಡೀ ಪ್ರಾಂತ್ಯದಲ್ಲಿ ಈ ಪ್ರದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಈ ಸ್ಥಳವು ತನ್ನ ಅನುಪಮ ಸೌಂದರ್ಯಕ್ಕಾಗಿ, ರುಚಿಕರವಾದ ಸೇಬುಗಳಿಗಾಗಿ ಮತ್ತು ಆತ್ಮೀಯವಾದ ಅತಿಥಿ ಸತ್ಕಾರಕ್ಕಾಗಿ ಹೆಸರುವಾಸಿಯಾಗಿದೆ. ಈ ಸ್ಥಳದಲ್ಲಿರುವ ಇನ್ನಿತರ ಆಕರ್ಷಣೆಯೆಂದರೆ ಇಲ್ಲಿನ ಹಳ್ಳಿಗಳು. ಅವುಗಳನ್ನು ಈಗ ಪಾರಂಪರಿಕ ಹಳ್ಳಿಗಳಾಗಿ ಪರಿವರ್ತನೆಗೊಳಿಸಲಾಗಿದೆ.

ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಇಲ್ಲಿನ ತೋಟಗಳಲ್ಲಿ ಬೆಳೆಯುವ ಸೇಬು ಮತ್ತು ಒಣದ್ರಾಕ್ಷಿ ಹಣ್ಣುಗಳು, ಅಲ್ಲಲ್ಲಿ ಕಂಗೊಳಿಸುವ ಹಸಿರುಮಯ ವಾತಾವರಣವು ಒಟ್ಟರೆಯಾಗಿ ಈ ಪ್ರದೇಶವನ್ನೆ ಒಂದು ರಂಗುರಂಗಾದ ತಾಣವನ್ನಾಗಿ ಮಾರ್ಪಡಿಸುತ್ತವೆ. ರುಖಾಲಾವು ಇಲ್ಲಿ ಬೆಳೆಯುವ ರಾಯಲ್, ಗೋಲ್ಡನ್ ಮತ್ತು ಗ್ರಾನ್ನಿ ಸ್ಮಿತ್ ಸೇಬುಗಳಿಗೆ ವಿಶ್ವಖ್ಯಾತಿಯನ್ನು ಪಡೆದಿದೆ.

ಹಸಿರುಮಯ ತೋಟಗಳ ಹೊರತಾಗಿ ರುಖಾಲಾವು ಹಲವಾರು ಪ್ರವಾಸಿ ಆಕರ್ಷಣೆಗಳನ್ನೂ ಹೊಂದಿದೆ. ಕಿಯರಿ ದೇವಾಲಯ ಮತ್ತು ದೇವ್ರಿ ದೇವಾಲಯಗಳು ರುಖಾಲಾದಲ್ಲಿರುವ ಇನ್ನಿತರ ಆಕರ್ಷಣೆಗಳಲ್ಲಿ ಪ್ರಮುಖವು. ಈ ಎರಡು ದೇವಾಲಯಗಳಿಗೆ ದಟ್ಟವಾದ ಕಾಡು ಮತ್ತು ತೋಟದ ಮನೆಗಳ ನಡುವಿನ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ತಲುಪಬಹುದು. ಕಿಯರಿ ದೇವಾಲಯವನ್ನು ಆದಿ ಶಕ್ತಿಯಾದ ದುರ್ಗಾ ಮಾತೆಗಾಗಿ ನಿರ್ಮಾಣ ಮಾಡಲಾಗಿದೆ. ಇದು ಸುಮಾರು 300 ವರ್ಷಗಳ ಹಳೆಯ ಸ್ಮಾರಕವಾಗಿದೆ.

ರುಖಾಲಾದಿಂದ ನಲ್ವತ್ತು ಕಿ.ಮೀ ದೂರದಲ್ಲಿರುವ ಚಂಬಿ-ಕುಪ್ಪರ್ ಪ್ರಾಂತ್ಯಕ್ಕೆ ಪ್ರವಾಸಿಗರು ಪ್ರವಾಸವನ್ನು ಕೈಗೊಳ್ಳುತ್ತಿರುತ್ತಾರೆ.

ರುಖಾಲಾವು ವಿಮಾನ, ರೈಲು ಮತ್ತು ರಸ್ತೆ ಮಾರ್ಗಗಳ ಉತ್ತಮ ಸಂಪರ್ಕ ಜಾಲವನ್ನು ಹೊಂದಿದೆ. ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳು ರುಖಾಲಾದ ಪ್ರಮುಖ ಋತುಗಳಾಗಿವೆ. ಇಲ್ಲಿಗೆ ಭೇಟಿಕೊಡಬೇಕೆಂದು ಬಯಸುವ ಪ್ರವಾಸಿಗರು ಈ ಸ್ಥಳಕ್ಕೆ ಬೇಸಿಗೆಯಲ್ಲಿ ಭೇಟಿಕೊಡುವುದು ಉತ್ತಮ. ಈ ಕಾಲವು ಇಲ್ಲಿ ಮೇ ನಲ್ಲಿ ಪ್ರಾರಂಭವಾಗಿ ಜುಲೈನಲ್ಲಿ ಅಂತ್ಯಗೊಳ್ಳುತ್ತದೆ. ಇದರೊಂದಿಗೆ ಚಳಿಗಾಲದಲ್ಲಿ ಸಹ ಈ ಪ್ರದೇಶಕ್ಕೆ ಭೇಟಿಕೊಡಬಹುದು. ಈ ಕಾಲದಲ್ಲಿ ಸಹ ಈ ಪ್ರದೇಶದ ಹವಾಮಾನವು ಹಿತವಾಗಿ ಮತ್ತು ಮುದವಾಗಿರುತ್ತದೆ.

ರುಖಾಲಾ ಪ್ರಸಿದ್ಧವಾಗಿದೆ

ರುಖಾಲಾ ಹವಾಮಾನ

ಉತ್ತಮ ಸಮಯ ರುಖಾಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರುಖಾಲಾ

  • ರಸ್ತೆಯ ಮೂಲಕ
    ರುಖಾಲಾಗೆ ಹೋಗಲು ಆಲೋಚಿಸುವ ಪ್ರವಾಸಿಗರು ಬಸ್ಸಿನ ಮೂಲಕ ಸಹ ತಲುಪಬಹುದು. ಶಿಮ್ಲಾವು ರುಖಾಲಾದಿಂದ 2.9 ಕಿ.ಮೀ ದೂರದಲ್ಲಿದ್ದು, ಬಸ್ಸಿನ ಮೂಲಕ ಸುಲಭವಾಗಿ ತಲುಪಬಹುದು. ಶಿಮ್ಲಾವು ಡಾಲ್‍ಹೌಸಿ, ಲಖ್ನೋ, ಶ್ರೀನಗರ್, ಚಂಡೀಗಢ್, ಮನಾಲಿ, ಕುಲು ಮತ್ತು ಜುಬ್ಬಲ್‍ಗಳ ನಡುವೆ ಉತ್ತಮ ಬಸ್ ಸಂಪರ್ಕವನ್ನು ಹೊಂದಿದೆ. ಇದರೊಂದಿಗೆ ಇಲ್ಲಿಗೆ ಡೆಹ್ರಾಡೂನ್, ನವದೆಹಲಿ ಮತ್ತು ಕಸೌಲಿಗಳಿಂದ ಸಹ ಬಸ್ಸುಗಳು ಬಂದು ಹೋಗುತ್ತಿರುತ್ತವೆ. ಚಂಡೀಗಢ್‍ನಿಂದ ರುಖಾಲಾಗೆ ನಿಯಮಿತವಾಗಿ ಎ ಸಿ ವೋಲ್ವೋ ಬಸ್ಸುಗಳು ಬರುತ್ತಿರುತ್ತವೆ. ಇವುಗಳ ದರವು ಪ್ರತಿ ವ್ಯಕ್ತಿಗೆ 1025 ರೂಪಾಯಿಗಳಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಕ ರೈಲು ನಿಲ್ದಾಣವು ರುಖಾಲಾಗೆ ಸಮೀಪದಲ್ಲಿರುವ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಕಲ್ಕ-ಶಿಮ್ಲಾ ಮಾರ್ಗದಲ್ಲಿ ಬರುತ್ತದೆ. ಶಿಮ್ಲಾ, ಧರಮ್‍ಪುರ್, ಸೋಲನ್, ಕಂಡಘಾಟ್, ಸಲೋಗ್ರ ಮತ್ತು ಬರೋಗ್‍ಗಳೊಂದಿಗೆ ರುಖಾಲಾವು ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಕಲ್ಕದಿಂದ ರುಖಾಲಾಗೆ ರೈಲು ಪ್ರಯಾಣವು ದರವು ಪ್ರಥಮ ದರ್ಜೆ ಪ್ರಯಾಣಕ್ಕೆ ಸುಮಾರು 100 ರಿಂದ 220 ರೂಪಾಯಿಯಿರುತ್ತದೆ. ಶಿಮ್ಲಾದಿಂದ ರುಖಾಲಾಗೆ ಟ್ಯಾಕ್ಸಿಗಳ ದರವು ಪ್ರತಿ ಕಿ.ಮೀ ಗೆ 7 ರೂಪಾಯಿಗಳ ಆಸುಪಾಸಿನಲ್ಲಿರುತ್ತವೆ. ನೀವು ಟ್ಯಾಕ್ಸಿಯನ್ನು ಬಾಡಿಗೆ ಪಡೆದು ಸಹ ರುಖಾಲಾಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭುಂತರ್ ವಿಮಾನ ನಿಲ್ದಾಣವು ರುಖಾಲಾಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಇಲ್ಲಿಂದ 41 ಕಿ.ಮೀ ದೂರದಲ್ಲಿದೆ. ಗಗ್ಗಲ್ ವಿಮಾನ ನಿಲ್ದಾಣವು ರುಖಾಲಾದಿಂದ ಸುಮಾರು 103 ಕಿ.ಮೀ ದೂರದಲ್ಲಿದೆ. ಇದು ಇಲ್ಲಿಗೆ ಬರಲು ಇರುವ ಬದಲಿ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣಗಳು ದೆಹಲಿ, ಮುಂಬೈ ಮತ್ತು ಧರ್ಮಶಾಲ ಹಾಗು ಇನ್ನಿತರ ನಗರಗಳೊಂದಿಗೆ ಉತ್ತಮ ವಿಮಾನ ಯಾನ ಸಂಪರ್ಕವನ್ನು ಹೊಂದಿದೆ. ಟ್ಯಾಕ್ಸಿ ಮತ್ತು ಕಾರುಗಳು ಈ ವಿಮಾನ ನಿಲ್ದಾಣದಿಂದ ರುಖಾಲಾಗೆ ತಲುಪಲು ಕೈಗೆಟುಕುವ ದರದಲ್ಲಿ ನಿಮಗೆ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri