ರೇಷ್ಮೆ ಉತ್ಪನ್ನಗಳನ್ನು ಒಳ್ಳೆಯ ಬೆಲೆಗೆ ಕೊಳ್ಳಬೇಕೆನಿಸಿರುವ ಪ್ರವಾಸಿಗರಿಗೆ, ರಾಮನಗರದ ರೇಷ್ಮೆ ಮಾರುಕಟ್ಟೆ ಒಳ್ಳೆಯ ಜಾಗ. ರೇಷ್ಮೆಗೆ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ರಾಮನಗರವನ್ನು, ರೇಷ್ಮೆ ನಗರ, ರೇಷ್ಮೆ ಸೀಮೆ ಎಂದೂ ಕರೆಯುತ್ತಾರೆ. ಈ ಪ್ರದೇಶವು ರೇಷ್ಮೆ ತಯಾರಿಕೆ ಅಥವಾ ರೇಷ್ಮೆ ಬೇಸಾಯಕ್ಕೆ ಹೆಸರುವಾಸಿ. ಇಲ್ಲಿ ತಯಾರಾಗುವ ರೇಷ್ಮೆ "ಮೈಸೂರು ರೇಷ್ಮೆ" ಎಂದೇ ಹೆಸರುವಾಸಿ. ಈ ಭಾಗದ ಜನರು ರೇಷ್ಮೆ ಉತ್ಪಾದನೆಯ ಕೆಲಸದಲ್ಲಿ ನಿರತರಾಗಿದ್ದು, ಏಷಿಯಾದ ಎರಡನೆ ಅತಿ ದೊಡ್ಡ ರೇಷ್ಮೆ ಗೂಡು ಮಾರುಕಟ್ಟೆ ಎಂದೇ ಖ್ಯಾತವಾದ ರಾಮನಗರದ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡುತ್ತಾರೆ.


Click it and Unblock the Notifications