ರಾಜೌರಿ ಜಿಲ್ಲೆಯನ್ನು ನೋಡಲು ಆಸಕ್ತಿ ಇರುವ ಪ್ರವಾಸಿಗರು ಬೇಸಿಗೆ ಕಾಲವಾದ ಏಪ್ರಿಲ್ ನಿಂದ ಜೂನ್ ತಿಂಗಳಲ್ಲಿ ಭೇಟಿ ನೀಡಬಹುದು. ಅಲ್ಲದೇ ಪ್ರಯಾಣಿಕರು ಉತ್ತಮ ಹವಾಮಾನ ಹೊಂದಿರುವ ಚಳಿಗಾಲದಲ್ಲಿಯೂ ಆಗಮಿಸಬಹುದು.
(ಏಪ್ರೀಲ್ ನಿಂದ ಜೂನ್): ಬೇಸಿಗೆ ಏಪ್ರಿಲ್ ನಿಂದ ಆರಂಭವಾಗುತ್ತದೆ ಮತ್ತು ಜೂನ್ ತಿಂಗಳ ತನಕ ಮುಂದುವರೆಯುತ್ತದೆ. ಬೇಸಿಗೆ ಸಮಯದಲ್ಲಿ ರಾಜೌರಿ ಜಿಲ್ಲೆಯ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಡಿ.ಸೆ ಮತ್ತು 20 ಡಿ.ಸೆ ನಷ್ಟು ದಾಖಲಾಗುತ್ತದೆ.
(ಜುಲೈ ನಿಂದ ಸೆಪ್ಟೆಂಬರ್) : ರಾಜೌರಿ ಪ್ರದೇಶದಲ್ಲಿ ಮಳೆಗಾಲವು ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ರಾಜೌರಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಗರಿಷ್ಠ ಮಳೆಯಾಗುತ್ತದೆ. ಅದರಲ್ಲೂ ಕೆಲವು ಸ್ಥಳಗಳಲ್ಲಿ ವಿಪರೀತ ಮಳೆಯುಂಟಾದರೂ ಇನ್ನೂ ಉಳಿದೆಡೆ ಆಲಿಕಲ್ಲಿನ ಮಳೆಯಾಗುತ್ತದೆ.
(ಡಿಸೆಂಬರ್ ನಿಂದ ಫೆಬ್ರವರಿ) : ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿವ ಚಳಿಗಾಲ ಫೆಬ್ರವರಿ ತಿಂಗಳವರೆಗೆ ಮುಂದುವರೆಯುತ್ತದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳಿಗೆ ಹೋಲಿಸಿದರೆ, ರಾಜೌರಿ ಜಿಲ್ಲೆಯಲ್ಲಿ ಚಳಿಗಾಲ ಅತ್ಯಂತ ಕಠಿಣವೇನೂ ಅಲ್ಲ. ಚಳಿಗಾಲದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 15 ಡಿ. ಸೆ ಮತ್ತು 7 ಡಿ.ಸೆ ದಾಖಲಾಗುತ್ತವೆ. ಈ ಸಮಯದಲ್ಲಿ ಹವಾಮಾನ ಅನುಕೂಲಕರವಾಗಿದ್ದು, ತಾಪಮಾನ ಸೂರ್ಯಾಸ್ತದ ನಂತರ ತೀವ್ರವಾಗಿ ಕುಸಿಯುತ್ತದೆ. ಇದರಿಂದ ಅಧಿಕ ಚಳಿ ಉಂಟಾಗುತ್ತದೆ.