ಮಹಾತ್ಮ ಗಾಂಧಿ ಅವರ ತಂದೆ, ಕಾಬಾ ಗಾಂಧಿ ಎಂದು ಕರೆಯಲ್ಪಡುತ್ತಿದ್ದ ಕರಮಚಂದ್ ಗಾಂಧಿ ಅವರು ರಾಜ್ ಕೋಟ್ ನ ಘೀ ಕಾಂತ ರಸ್ತೆಯಲ್ಲಿರುವ ಈ ಮನೆಯಲ್ಲಿ ವಾಸಿಸುತ್ತಿದ್ದರು. ಮಹಾತ್ಮ ಗಾಂಧಿ ಅವರು ತನ್ನ ಬಾಲ್ಯದ ದಿನಗಳನ್ನು ಕಳೆದಿರುವುದು ಇದೇ ಮನೆಯಲ್ಲಿ. ಗಾಂಧಿ ಅವರ ಜೀವನದ ಬಗ್ಗೆ ಈಗ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು, ಇದನ್ನು ಗಾಂಧಿ ಸ್ಮೃತಿ ಎಂದು ಕರೆಯಲಾಗುತ್ತಿದೆ. ಇಲ್ಲಿ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟ ವಿವಿಧ ಫೋಟೊಗ್ರಾಫ್ ಗಳು, ಕಲಾಕೃತಿಗಳು ಮತ್ತು ವೈಯಕ್ತಿಕ ವಸ್ತುಗಳಿವೆ. ವಾರದ ಆರು ದಿನ ಬೆಳಗ್ಗೆ 9ರಿಂದ ಸಂಜೆ 5ರ ತನಕ ಇಲ್ಲಿಗೆ ಭೇಟಿ ನೀಡಬಹುದು.


Click it and Unblock the Notifications