ಸರ್ವ ಧರ್ಮ ಐಕ್ಯ ಸ್ಥಂಭ 50 ಅಡಿ ಎತ್ತರದ ಕಂಬವಾಗಿದ್ದು, ಇದು ಎಲ್ಲ ಧರ್ಮಗಳ ಐಕ್ಯತೆಯ ಸಂಭ್ರಮಾಚರಣೆಯ ಸಂಕೇತ. ಭಗವಂತನ ಅವತಾರದ ಆಗಮನದ ಸಂಕೇತಾರ್ಥವಾಗಿ ನವೆಂಬರ್ 1975 ರಲ್ಲಿ ಇದನ್ನು ನಿರ್ಮಿಸಲಾಯಿತು. ಶ್ರೀ ಭಗವಾನ್ ಸತ್ಯ ಸಾಯಿ ಸೇವಾ ಸಂಸ್ಥೆಯ ವತಿಯಿಂದ ಪ್ರಶಾಂತಿ ನಿಲಯದಲ್ಲಿ ನಡೆದ ಜಾಗತೀಕ ಸಮಾವೇಶದ ಸಮಯದಲ್ಲಿಯೇ ಇದನ್ನು ನಿರ್ಮಿಸಲಾಯಿತು.