ಪೂರ್ಣಚಂದ್ರ ಆಡಿಟೋರಿಯಂ ಅನ್ನು 1973 ರಲ್ಲಿ ಕಟ್ಟಲಾಗಿದ್ದು, ಇದರ 60ಮೀ*40ಮೀ ವಿಸ್ತೀರ್ಣದಲ್ಲಿ ಸುಮಾರು 15,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದ್ದು ಖಂಬಗಳಿಲ್ಲದ ರಚನೆಯನ್ನು ಹೊಂದಿದೆ. ದೇವರ ರೂಪ ಹಾಗೂ ವಿವಿಧ ಅವತಾರಗಳ, ಎಲ್ಲ ಧರ್ಮಗಳ ಸಾಧು ಸಂತರ ಭಿತ್ತಿಚಿತ್ರಗಳನ್ನು ಇಲ್ಲಿ ಕಾಣಬಹುದು. ಆಡಿಟೋರಿಯಂ ಅನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಚರ್ಚೆ ಮತ್ತು ಸಂಕೀರ್ಣಗಳಿಗೆ ಬಳಸಲಾಗುತ್ತಿದ್ದು ಹಲವು ಬಾಲ್ಕನಿ ಮತ್ತು ಗುಮ್ಮಟಗಳನ್ನು ಹೊಂದಿದೆ. ದಸರೆಯ ದಿನಗಳಲ್ಲಿ ಇಲ್ಲಿ ಯಜ್ಞಗಳನ್ನು ನಡೆಸಲಾಗುತ್ತದೆ.


Click it and Unblock the Notifications