ಪಠಾನ್‍ಕೋಟ್ ವಿಮಾನ ನಿಲ್ದಾಣವು ಬಹುತೇಕವಾಗಿ ಭಾರತೀಯ ವಾಯು ಪಡೆಯಿಂದ ಬಳಸಲ್ಪಡುತ್ತದಾದರೂ, ನಾಗರಿಕರ ಅನುಕೂಲಕ್ಕೆಂದು ದೆಹಲಿ ಹಾಗು ಕುಲ್ಲುಗಳಿಂದ ಕೆಲವು ವಿಮಾನ ಹಾರಾಟಗಳಿವೆ. ಇನ್ನು ಇದಕ್ಕೆ ತಲುಪಲು ಬಳಸಬಹುದಾದ ಹತ್ತಿರದ ವಿಮಾನ ನಿಲ್ದಾಣವೆಂದರೆ ಅಮೃತಸರ್. ಇದು ಪಠಾನ್‍ಕೋಟ್ ನಿಂದ 108 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಪಠಾನ್‍ಕೋಟ್ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಲಭ್ಯವಿರುತ್ತವೆ.