Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಗೊಂಗ್ » ಆಕರ್ಷಣೆಗಳು » ಪಂಗೊಂಗ್ ತ್ಸೊ

ಪಂಗೊಂಗ್ ತ್ಸೊ, ಪಂಗೊಂಗ್

3

ಪಂಗೊಂಗ್ ಸರೋವರ ಅಂತಲೂ ಕರೆಸಿಕೊಳ್ಳುವ ಹಿಮಾಲಯದ ಈ ಸರೋವರವು ಸಮುದ್ರ ಮಟ್ಟದಿಂದ  4250ಮೀಟರ್ (13,900 ಅಡಿ) ಎತ್ತರದಲ್ಲಿದೆ ಹಾಗು 134  ಕಿ.ಮೀ ಉದ್ದವಾಗಿದ್ದು, 7 ಕಿ.ಮಿ ಅಗಲವಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಹತ್ತಿರದಲ್ಲೇ ಇರುವ ಗ್ರೀನ್ ವ್ಯಾಲಿ ಮತ್ತು ಥಿಕ್ಸೆ ಗ್ರಾಮಗಳು ಆಕರ್ಷಿಸುತ್ತವೆ. ಕಣಿವೆಯ ಮೂಲಕ ಥಿಕ್ಸೆ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಅಸಂಖ್ಯ ಪುರಾತನ ಮಂದಿರಗಳನ್ನು ಕಾಣಬಹುದು.

ಸ್ತಂಬದಂತಹ ತಲೆಯುಳ್ಳ ಹೆಬ್ಬಾತುಕೋಳಿಗಳು, ಸೈಬೀರಿಯನ್ ಕ್ರೇನ್ ಹಾಗೂ ನೀರ್ಕೋಳಿಗಳಂತಹ ವಿವಿಧ ಜಾತಿಯ ಪಕ್ಷಿಗಳು ಈ ಸರೋವರದಲ್ಲಿದ್ದು ಪಕ್ಷಿವೀಕ್ಷಕರಿಗೆ ಸ್ವರ್ಗದ ಅನುಭವ ನೀಡುತ್ತವೆ. ಇದು ಉಪ್ಪು ನೀರಿನ ಸರೋವರವಾದರೂ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ.

ಲೇಹ್ ದಿಂದ ಪಂಗೊಂಗ್ ತ್ಸೊ, ಕೇವಲ ಐದು ತಾಸುಗಳ ದಾರಿ. ಆದರೂ ಈ ಸರೋವರವು ಸೈನೋ-ಭಾರತೀಯ ವಾಸ್ತವಿಕ ನಿಯಂತ್ರಣ ರೇಖೆಯ ಮೇಲಿರುವದರಿಂದ ಸರೋವರವನ್ನು ಸಮೀಪಿಸಲು ಒಳಾಂಗಣ ರೇಖಾ ಪರವಾನಿಗೆಯನ್ನು ಪಡೆಯುವುದು ಅಗತ್ಯ. ಭಾರತೀಯರು ವಯಕ್ತಿಕ ಪರವಾನಿಗೆಗಳು ಹಾಗೂ ಇತರರು ಸಮೂಹ ಪರವಾನಿಗೆಯನ್ನು ಪಡೆಯಬೇಕಾಗುತ್ತದೆ. ಸಮೂಹ ಪರವಾನಿಗೆಯಲ್ಲಿ ಒಂದು ಗುಂಪು ಕನಿಷ್ಠ ಮೂರು ವ್ಯಕ್ತಿಗಳನ್ನು ಹೊಂದಿರಬೇಕು ಹಾಗೂ ಅವರೊಂದಿಗೆ ಮಾನ್ಯತೆ ಪಡೆದ ಮಾರ್ಗದರ್ಶಕರೂ ಇರಬೇಕಾಗಿರುವುದು ಕಡ್ಡಾಯ. ಸ್ವಲ್ಪ ಪ್ರಮಾಣದ ನಿಗದಿತ ಶುಲ್ಕ ಭರಿಸಿ ಲೇಹ್ ಪ್ರವಾಸಿ ಕಚೇರಿಯಲ್ಲಿ ಈ ಪರವಾನಗಿಗಳನ್ನು ಪಡೆಯಬಹುದು. ಭದ್ರತೆಯ ದೃಷ್ಟಿಯಿಂದ ಪಂಗೊಂಗ್ ಸರೋವರದಲ್ಲಿ ಬೋಟಿಂಗಗೆ ಅನುಮತಿ ನೀಡಲಾಗುವದಿಲ್ಲ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue