Search
  • Follow NativePlanet
Share
ಮುಖಪುಟ » ಸ್ಥಳಗಳು » ನುಹ್ » ಹವಾಮಾನ

ನುಹ್ ಹವಾಮಾನ

ಸಪ್ಟಂಬರ ಮತ್ತು ನವಂಬರ ತಿಂಗಳುಗಳು ನುಹ್ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ ಆಗಿದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ಅಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

ನುಹ್ ನಲ್ಲಿ ಬೇಸಿಗೆ ಕಾಲವು ಮಾರ್ಚ ತಿಂಗಳಿನಿಂದ ಮೇ ತಿಂಗಳಿನವರೆಗೂ ಇರುತ್ತದೆ. ಈ ತಿಂಗಳುಗಳು ಅತಿಯಾದ ಉಷ್ಣಾಂಶದಿಂದ ಕೂಡಿರುತ್ತದೆ.  ಮತ್ತು ಈ ಸಮಯದಲ್ಲಿ ಇಲ್ಲಿನ ದಿನದ ತಾಪಮಾನವು ಸುಮಾರು 38 ಡಿಗ್ರಿ ಸೆಲ್ಸಿಯಸನಷ್ಟು ಇರುತ್ತದೆ. ಮೇ ತಿಂಗಳು ಅತಿ ಹೆಚ್ಚು ಉಷ್ಣಾಂಶ ಇರುವ ತಿಂಗಳಾಗಿದೆ.

ಮಳೆಗಾಲ

ನುಹ್ ನಲ್ಲಿ ಮಳೆಗಾಲ ಜೂನ ತಿಂಗಳಿನಿಂದ ಸಪ್ಟಂಬರ ತಿಂಗಳಿನವರೆಗೂ ಇರುತ್ತದೆ. ಜುಲೈ ಮತ್ತು ಅಗಸ್ಟ ತಿಂಗಳಿನಲ್ಲಿ ವರ್ಷದಲ್ಲಿಯೇ ಅತಿ ಹೆಚ್ಚು ಮಳೆ ಆಗುತ್ತದೆ. ಈ ಸಮಯವು ಪ್ರವಾಸಕ್ಕೆ ಯೋಗ್ಯವಾದುದು ಅಲ್ಲ. ಈ ಸಮಯದಲ್ಲಿ ಪ್ರಯಾಣವು ಕಠಿಣಕರವಾಗಿರುತ್ತದೆ. ಮಳೆಗಾಲದ ಮಳೆಯು ಬೇಸಿಗೆ ಕಾಲದ ಬಿಸಿಯನ್ನು ಕಡಿಮೆ ಮಾಡಿ ಮನಸ್ಸಿಗೆ ತಂಪು ಮತ್ತು ನೆಮ್ಮದಿಯನ್ನು ನೀಡುತ್ತದೆ.

ಚಳಿಗಾಲ

ನುಹ್ ನಲ್ಲಿ ಚಳಿಗಾಲವು  ಡಿಸಂಬರ ತಿಂಗಳಿನಿಂದ ಫೆಬ್ರುವರಿ ತಿಂಗಳಿನವರೆಗೂ ಇರುತ್ತದೆ. ಡಿಸಂಬರ ತಿಂಗಳಿನಲ್ಲಿ ಅತಿ ಹೆಚ್ಚು ಚಳಿ ಇರುತ್ತದೆ.