ಇದು ಬೌದ್ದರ ಆಶ್ರಮ. ಕ್ಯಾಗರ್ ಮತ್ತು ಸುಮುರ್ ಗ್ರಾಮಗಳ ನಡುವಿರುವ ಈ ಆಶ್ರಮವನ್ನು ಲಾಮಾ ತ್ಸುಲ್ತರಿಮ್ ನಿಮಾ ಕಟ್ಟಿಸಿದರು. ಬೌದ್ದರ ಸುರುಳಿ, ಬೌದ್ದ ಮೂರ್ತಿಗಳನ್ನು ಪ್ರವಾಸಿಗರು ನೋಡಬಹುದು. 1962 ರಲ್ಲಿ ಟಿಬೇಟಿಯನ್ ಆಧ್ಯಾತ್ಮ ಗುರು ದಲಾಯ್ ಲಾಮಾಗೆ ಗೊಂಪದ ಏಳು ದೇವಸ್ಥಾನಗಳನ್ನು ಉದ್ಘಾಟಿಸಲು ಆಹ್ವಾನ ನೀಡಲಾಗಿತ್ತು. ಆಶ್ರಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಬೌದ್ದ ಭಿಕ್ಷುಗಳಿದ್ದು ಅವರೆಲ್ಲರ ಅವಶ್ಯಕತೆಯನ್ನು ಆಶ್ರಮದ ಆಡಳಿತ ಮಂಡಳಿ ಪೂರೈಸುತ್ತದೆ.


Click it and Unblock the Notifications