ಮೈತ್ರೇಯ ಬುದ್ದನನ್ನು ಭವಿಷ್ಯದ ಬುದ್ದನೆಂದೇ ನಂಬಲಾಗುತ್ತದೆ ಮತ್ತು ನಗುವ ಬುದ್ದ ಎಂಬ ನಾಮಧೇಯವೂ ಇದೆ. ಇಲ್ಲಿ 32 ಮೀಟರ್ ಎತ್ತರದ ಮೈತ್ರೇಯ ಬುದ್ದನ ಮೂರ್ತಿಯಿದೆ. ಪಾಕಿಸ್ತಾನದ ಕಡೆಗೆ ಶ್ಯೋಕ್ ನದಿಗೆ ಮುಖ ಮಾಡಿ ನಿಂತಿದೆ ಈ ಮೂರ್ತಿ. ಸ್ಥಳೀಯರಿಂದ ಸಂಗ್ರಹಿಸಿದ ಹಣದಿಂದಲೇ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಗಂದೇನ್ ಥಿಪಾ ಅಥವಾ ಗೆಲುಗ್ಪಾ ಮತ್ತು ರಿಜು ಆಶ್ರಮದ ವತಿಯಿಂದ 8 ಕೆಜಿ ಚಿನ್ನವನ್ನು ನೀಡಲಾಗಿದೆ. 2006 ರ ಏಪ್ರಿಲ್ ನಲ್ಲಿ ಇದರ ನಿರ್ಮಾಣ ಕಾರ್ಯ ಶುರುವಾಯಿತು. ಟಿಬೇಟಿಯನ್ ಆಧ್ಯಾತ್ಮ ಗುರು ದಲಾಯ್ ಲಾಮಾ 25 ನೇ ಜುಲೈ 2010 ರಲ್ಲಿ ಇದನ್ನು ಉದ್ಘಾಟಿಸಿದರು. ಸ್ಥಳೀಯರು ಹೇಳುವಂತೆ, ಮೈತ್ರೇಯಿ ಬುದ್ದನ ಮೂರ್ತಿಯನ್ನು ಸ್ಥಾಪಿಸಿರುವುದು ಶಾಂತಿ ಮತ್ತು ಗ್ರಾಮ ರಕ್ಷಣೆಗಾಗಿ.


Click it and Unblock the Notifications