ನುಬ್ರಾ ಕಣಿವೆಯನ್ನು ತಲುಪುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಖರ್ದಂಗ್ ಲಾ ಪಾಸ್. ಕೆ-ಟಾಪ್ ಎಂದೇ ಇದು ಕರೆಯಲ್ಪಡುತ್ತದೆ. ಸಮುದ್ರ ಮಟ್ಟದಿಂದ 18380 ಅಡಿ ಎತ್ತರದಲ್ಲಿರುವ ಖರ್ದಂಗ್ ಲಾ ಪಾಸ್ ವಿಶ್ವದ ಅತಿ ಎತ್ತರದ ವಾಹನ ಸಂಚಾರದ ರಸ್ತೆ ಹೊಂದಿರುವ ಖ್ಯಾತಿ ಹೊಂದಿದೆ.
ಕೆ-ಟಾಪ್ ನ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು 17 ನೇ ಆಗಸ್ಟ್ 1972. ಭಾರತೀಯ ಸೇನೆಯ 201 ಇಂಜಿನೀಯರ್ ರೆಜಿಮೆಂಟ್ ಮದ್ರಾಸ್ ಸ್ಯಾಪರ್ಸ್ ಸಹಾಯದಿಂದ ಕೆ-ಟಾಪ್ ನಿರ್ಮಾಣ ಮಾಡಲಾಯಿತು. ಒಂದು ವರ್ಷದ ಕಾಮಗಾರಿಯ ನಂತರ 27 ಆಗಸ್ಟ್ 1973 ರಲ್ಲಿ ಇದು ಸಾರ್ವಜನಿಕ ಬಳಕೆಗೆ ಅರ್ಪಿತವಾಯಿತು. ವರ್ಷಪೂರ್ತಿ ಖರ್ದಂಗ್ ಲಾ ಪಾಸ್ ನ ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿರುವುದು ಬಾರ್ಡರ್ ರೋಡ್ ಆರ್ಗನೈಸೇಷನ್. ಕಾರಾಕೋರಮ್ ಮತ್ತು ಲಡಾಖ್ ನ ಸೌಂದರ್ಯವನ್ನು ಉತ್ತರ ಮತ್ತು ದಕ್ಷಿಣದಲ್ಲಿ ಸವಿಯಬಹುದು.


Click it and Unblock the Notifications